ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು; ಅಂತರಂಗ ಪ್ರತಿಷ್ಠಾನದ ರಾಷ್ಟ್ರ ನಮನ

ಅಂತರಂಗ ಪ್ರತಿಷ್ಠಾನದ ರಾಷ್ಟ್ರನಮನ ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ಬಿ.ಶ್ರೀಧರ್ ಭಟ್, ಜಿ.ಜಿ.ಹೆಗಡೆ, ಎಸ್.ಕೆ.ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ.ಗಿರಿಧರ ಕಜೆ, ಡಾ.ಗಣಪತಿ ಹೆಗಡೆ, ಮಧುರಾ ಗಾಂವ್ಕರ ಮತ್ತಿತರರಿದ್ದರು.
ಅಂತರಂಗ ಪ್ರತಿಷ್ಠಾನದ ರಾಷ್ಟ್ರನಮನ ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ಬಿ.ಶ್ರೀಧರ್ ಭಟ್, ಜಿ.ಜಿ.ಹೆಗಡೆ, ಎಸ್.ಕೆ.ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ.ಗಿರಿಧರ ಕಜೆ, ಡಾ.ಗಣಪತಿ ಹೆಗಡೆ, ಮಧುರಾ ಗಾಂವ್ಕರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು
  • ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್​ನ ಡಾ.ಗಣಪತಿ ಹೆಗಡೆ ಹೇಳಿಕೆ
  • ಅಂತರಂಗ ಪ್ರತಿಷ್ಠಾನದ ರಾಷ್ಟ್ರ ನಮನ ಕಾರ್ಯಕ್ರಮ

ಬೆಂಗಳೂರು:ಜನ್ಮ ನೀಡಿದತಾಯಿ ಮತ್ತು,ತಾಯ್ನಡು ಕಣ್ಣಿಗೆಕಾಣದ ಸ್ವರ್ಗಕ್ಕಿಂತಲೂ ಮಿಗಿಲಾಗಿದ್ದು,ಹುಟ್ಟಿದ ಮನುಷ್ಯತನ್ನ ಜಿವನದುದ್ದಕ್ಕೂ ದೇಶಕ್ಕೆಋಣಿಯಾಗಿರಬೇಕು ಎಂದು ಸಂಸ್ಕೃತ-ಸಂಸ್ಕೃತಿಪ್ರತಿಷ್ಠಾನಮ್ ಸಂಸ್ಥಾಪಕಡಾ.ಗಣಪತಿಹೆಗಡೆ ಹೇಳಿದ್ದಾರೆ.

ಅಂತರಂಗಪ್ರತಿಷ್ಠಾನವು ವಿವೇಕಾನಂದಜಯಂತಿ ಹಿನ್ನೆಲೆಯಲ್ಲಿ ಶೇಷಾದ್ರಿಪುರಂಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆಹಮ್ಮಿಕೊಂಡಿದ್ದ ರಾಷ್ಟ್ರನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನ್ಮಭೂಮಿಸುರಕ್ಷಿತವಾಗಿದ್ದರೆ ಎಲ್ಲರೀತಿಯ ಸಾಧನೆ ಮಾಡಲು ಸಾಧ್ಯ.ಅಂತಹ ಜನ್ಮಭೂಮಿಯನ್ನುಹಗಲಿರಳು ತಮ್ಮ ಪ್ರಾಣವನ್ನುಒತ್ತೆಯಿಟ್ಟು ರಕ್ಷಿಸುತ್ತಿರುವಸೈನಿಕರಿಗೆ ಎಷ್ಟು ಕೃತಜ್ಞತೆಸಲ್ಲಿಸಿದರೂ ಕಡಿಮೆಯೇ ಎಂದರು.

ಸಮಾರಂಭದಲ್ಲಿರಾಷ್ಟ್ರಚೇತನ ಕವನ ಸಂಗ್ರಹ ಹಾಗೂಮನಸ್ಸೆಂಬ ಮಾಯಾ ಬಜಾರ್ ಕೃತಿಗಳನ್ನುಬಿಡುಗಡೆ ಮಾಡಲಾಯಿತು.ದೇಶಕ್ಕಾಗಿಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದಬಿ.ಶ್ರೀಧರ್ಭಟ್, ಜಿ.ಜಿ.ಹೆಗಡೆ,ಎಸ್.ಕೆ.ಭಟ್ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಚೈತನ್ಯಸಂಪದ ಮತ್ತು ದೇಶಭಕ್ತಿ ಗೀತೆಗಳರಚನಾ ಸ್ಪರ್ಧೆಯ ವಿಜೇತರಿಗೆಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿಪ್ರತಿಷ್ಠಾನದ ಅಧ್ಯಕ್ಷೆ ಮಧುರಾಗಾಂವ್ಕರ ಯಲ್ಲಾಪುರ,ಮಾನವ ಹಕ್ಕುಗಳಆಯೋಗದ ಡಿಎಸ್‌ಪಿ ಸುಧೀರ್ಎಂ.ಹೆಗಡೆ,ರಂಗಕರ್ಮಿಬ..ಸುರೇಶಮತ್ತಿತರರು ಉಪಸ್ಥಿತರಿದ್ದರು.

ಯೋಧರನ್ನು ಗೌರವಿಸಿದರೆ ದೇವರ ಪೂಜೆಯನ್ನು ಮಾಡಿದಂತೆ. ದೇಶದ ಸುರಕ್ಷತೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಯೋಧರು ದೇವರ ಸಮಾನ. ಅಂತಹವರನ್ನು ಗುರುತಿಸುವ ಕಾರ್ಯ ಮಾಡಿರುವ ಅಂತರಂಗ ಪ್ರತಿಷ್ಠಾನ ಕಾರ್ಯ ಸುತ್ಯಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net