ತಾಯಿಯೇ ಮೊದಲ ದೇವರು

Mother is the first god
Mother is the first god
Published on
ಎಂ.ಎನ್.ಕೋಟೆ: ಇಡೀ ಜಗತ್ತಿನಲ್ಲಿ ತಾಯಿಯೇ ದೇವರಾಗಿದ್ದು, ದೇವರನ್ನು ತಾಯಿ ರೂಪದಲ್ಲಿ ಕಾಣಬೇಕು ಎಂದು ಬೆಳ್ಳಾವಿ ಮಠದ ಶ್ರೀ ಕಾರದ ವೀರ ಬಸವಸ್ವಾಮೀಜಿ ಹೇಳಿದರು.
ಗುಬ್ಬಿ ತಾಲೂಕಿನ ಅಳಿಲಟ್ಟ ಮಜರೆ ಹುಚ್ಚನ ಪಾಳ್ಯ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯದ ವಿವಾನ ಗೋಪುರ ಕಳಸ, ಲಿಂಗ ಹಾಗೂ ಸ್ತಂಭ ಪ್ರತಿಷ್ಠಾಪನೆ ಮಹೋತ್ಸವದ ಧಾರ್ಮಿಕ ಸವಾರಂಭವನ್ನು ಉದ್ಘಾಟಿಸಿ ವಾತನಾಡಿ, ಹಿಂದೂ ಧರ್ಮದಲ್ಲಿ ಸಾಕಷ್ಟು ದೇವಾಲಯಗಳನ್ನು ನಾವು ನಿರ್ವಾಣ ವಾಡುತ್ತಿದ್ದೇವೆ. ದೇವಾಲಯ ನಿರ್ವಾಣದಿಂದಲೇ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಧಾರ್ಮಿಕ ಸವಾರಂಭಗಳು ಹೆಚ್ಚೆಚ್ಚು ನಡೆಯಬೇಕು. ಇದಕ್ಕೆ ಇಡೀ ಕುಟುಂಬ ಸಮೇತ ಭಾಗವಹಿಸಬೇಕು. ಇದರಿಂದ ಮಕ್ಕಳಿಗೆ ದೇವರು, ಸಂಸ್ಕಾರದ ಬಗ್ಗೆ ಅರಿವು ಮೂಡುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ದೇವಾಲಯಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಇಂದು ಧರ್ಮ ಉಳಿಯಬೇಕಾದರೆ ನಾವೆಲ್ಲರೂ ಕೂಡ ಒಂದಾಗಬೇಕು. ಹಾಗಾಗಿ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾಡಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾ.ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ತೇವಡೆಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಧಾನ ಅರ್ಚಕ ಗಿರೀಶ್, ದೇವಾಲಯ ಸಮಿತಿ ಅಧ್ಯಕ್ಷ ಚಿದಾನಂದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net