

ಗೌರಿಬಿದನೂರು;
ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ಬಸ್ ಡಿಕ್ಕಿಯಾಗಿ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ್ಟಿದ್ದು, ಮತ್ತೊಬ್ಬ ಮಗ ಗಾಯಗೊಂಡಿದ್ದಾನೆ.
ಸಂಭ್ರಮದ ಬದಲಿಗೆ ಸೂತಕ
ಗಗನ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆ, ಚಂದನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ವರಮಹಾಲ್ಮ ಹಬ್ಬದ ಪ್ರಯುಕ್ತ ತಾಯಿ ಮತ್ತು ಮಕ್ಕಳು ನಗರದ ದೇವಾಲಯವೊಂದಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಬಳಿಕ ನಾಗಮಣಿ ತವರು ಮನೆ ಕುಂಟ ಚಿಕ್ಕನಹಳ್ಳಿಗೆ ಹಬ್ಬಕ್ಕೆಂದು ಹೋಗುವಾಗ ಅವಡ ಸಂಭವಿಸಿದೆ. ಅಪಘಾತದಲ್ಲಿ ತಾಯಿ, ಮಗ ಮೃತಪಟ್ಟಿರುವ ಸುದ್ದಿ ಕಾದಲವೇಣಿ ಗ್ರಾಮಕ್ಕೆ ಬರಸಿಡಿಲಿನಂತೆ ಬಂದೆರಗಿದೆ. ಹಬ್ಬದ ಸಂಭ್ರಮದಲ್ಲಿ ಸೂತಕದ ಛಾಯೆ ಆವರಿಸಿದೆ.