ಗ್ರಾಮದ ಸುರೇಶ್ ಕುಮಾರ್ ಅವರ ಪತ್ನಿ ಪ್ರಮೀಳಾ(36), ಪುತ್ರಿ ಸ್ವಪ್ನಾ(22), ಪುತ್ರ ಚರಣ್ (18) ಮೃತರು. ಕೃಷಿ ಹೊಂಡ ಇರುವ ತೋಟದ ಮಾಲೀಕ ಎಂದಿನಂತೆ ತೋಟಕ್ಕೆ ಹೋದಾಗ ಹೊಂಡದಲ್ಲಿ ಶವಗಳು ತೇಲುತ್ತಿದ್ದುದನ್ನು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೃಷಿ ಹೊಂಡ ಸಮೀಪ ಜಮಾಯಿಸಿದ್ದರು.