ಹುಚ್ಚು ನಾಯಿ ಕಚ್ಚಿ 7ಕ್ಕೂ ಹೆಚ್ಚು ಜನರಿಗೆ ಗಾಯ

 ಯಳಂದೂರು ಪಟ್ಟಣದಲ್ಲಿ ಹುಚ್ಚುನಾಯಿ ದಾಳಿಯಿಂದ ಗಾಯಗೊಂಡಿರುವ ಚೌಡಮ್ಮ, ಲಕ್ಷಮ್ಮ
ಯಳಂದೂರು ಪಟ್ಟಣದಲ್ಲಿ ಹುಚ್ಚುನಾಯಿ ದಾಳಿಯಿಂದ ಗಾಯಗೊಂಡಿರುವ ಚೌಡಮ್ಮ, ಲಕ್ಷಮ್ಮ
Published on
ಯಳಂದೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿಗಳಲ್ಲಿ ನಾಯಿಗಳ ಹಾವಳಿ ವಿಪರೀತರಾಗಿದ್ದು, ಜನಸಾಮಾನ್ಯರು ತಿರುಗಾಡಲು ಭಯ ಪಡುವಂತಾಗಿದೆ. ಭಾನುವಾರ ಪಟ್ಟಣದಲ್ಲಿ ಹುಚ್ಚುನಾಯಿ ದಾಳಿಗೆ 7ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪಟ್ಟಣದ ಕೆನರಾ ಬ್ಯಾಂಕ್, ಎಲೇಕೇರಿ ಬೀದಿ, ಮಹದೇಶ್ವರ ಚಿತ್ರಮಂದಿರ ಸುತ್ತಮುತ್ತ ಅಡ್ಡಾಡುವ ಹುಚ್ಚು ನಾಯಿಯೊಂದು ಏಕಾಏಕಿ ದಾಳಿ ಮಾಡಿ ವೈ.ಕೆ.ಮೋಳೆ ಗ್ರಾಮದ ಲಕ್ಷ್ಮಮ್ಮ, ಪಟ್ಟಣದ ನಿವಾಸಿ ಚೌಡಮ್ಮ, ಕೆ.ದೇವರಹಳ್ಳಿ ಗ್ರಾಮದ ರತ್ನಮ್ಮ, ಸೇರಿದಂತೆ ಸೇರಿದಂತೆ 7 ಜನರಿಗೆ ಹುಚ್ಚು ಕಚ್ಚಿ ಗಾಯಗೊಳಿಸಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ. ಈ ಪ್ರದೇಶದ ಸುತ್ತಮುತ್ತ ಬ್ಯಾಂಕ್, ಹೋಟೆಲ್, ಟೀ ಅಂಗಡಿ, ಚಿಲ್ಲರೆ ಅಂಗಡಿ, ಬಟ್ಟೆ ಅಂಗಡಿ, ಚಿತ್ರಮಂದಿರ ಸೇರಿದಂತೆ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಸ್ಥಳವಾಗಿದ್ದು, ಈ ದಾಳಿಯಿಂದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಕೆನರಾ ಬ್ಯಾಂಕ್, ಮಹದೇಶ್ವರ ಚಿತ್ರಮಂದಿರ, ಎಲೆಕೇರಿ ಬೀದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬರಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕು. ಹಗಲು, ರಾತ್ರಿ ಎನ್ನದೆ ಬೀದಿ ನಾಯಿಗಳ ಹಿಂಡು ಅಲ್ಲಲ್ಲಿ ಠಿಕಾಣಿ ಹೂಡಿರುತ್ತವೆ. ಕೋಳಿ, ಮಟನ್ ಮಾಂಸದ ಅಂಗಡಿಗಳು ಜತೆಗೆ ಬೀದಿ ಬದಿಯ ಅಂಗಡಿಯಲ್ಲಿ ರಸ್ತೆಗೆ ಎಸೆಯುವ ಆಹಾರ ಪದಾರ್ಥಗಳಿಗೆ ಮುಗಿಬೀಳುವ ಬೀದಿ ನಾಯಿಗಳು ಜನರು ಮೇಲೂ ದಾಳಿ ಮಾಡುತ್ತಿವೆ. ಪಪಂ ವ್ಯಾಪ್ತಿಯ 11 ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂಖ್ಯೆ ವಿಪರೀತವಾಗಿದೆ. ಹುಚ್ಚು ನಾಯಿಯೊಂದು ಏಕಾಏಕಿ 7 ಜನರನ್ನು ಕಡಿದು ಗಾಯಗೊಳಿಸಿದೆ. ಇದರಿಂದ ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಸಂಚಾರಿಸಲು ಭಯಪಡುವಂತಾಗಿದೆ. ಸಂಬಂಧಿಸಿದವರು ಶೀಘ್ರ ಗಮನಹರಿಸಿ ಮುಂದಾಗುವ ಅನಾಹುತ ತಡೆಯಲಿ.
* ಅನಿಲ್ ಕುಮಾರ್, ಪಟ್ಟಣದ ನಿವಾಸಿ
ಪಟ್ಟಣದಲ್ಲಿ ಬೀದಿನಾಯಿ ದಾಳಿಯಿಂದ ಜನರು ಗಾಯಗೊಂಡಿರುವ ಬಗ್ಗೆ ಮಾಹಿತಿ ಪಡೆದು ತಕ್ಷಣ ಅಧಿಕಾರಿಗಳ ತಂಡ ರಚನೆ ಮಾಡಿಕೊಂಡು ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಜತೆಗೆ ಪಟ್ಟಣ ಹೊರ ಪ್ರದೇಶದಲ್ಲಿ ಶೆಡ್ ನಿರ್ಮಾಣ ಮಾಡಿ ನಾಯಿಗಳ ನಿಗಾ ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
*ಡಾ.ರಾಘವೇಂದ್ರ, ಆರೋಗ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಯಳಂದೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net