2 ಸಾವಿರಕ್ಕೂ ಅಧಿಕ ಗಿಡಗಳು ಅಗ್ನಿಗಾಹುತಿ

ಇಂಡಿ ತಾಲೂಕಿನ ಸಾವಳಸಂಗ ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಗ್ನಿಗಾಹುತಿಯಾದ ಗಿಡಗಳನ್ನು ವಲಯ ಅರಣ್ಯಾಧಿಕಾರಿ ಮಂಜುನಾಥ ಧೂಳೆ, ಶಿವರುದ್ರಪ್ಪ ಕಬಾಡಿಗ ಪರಿಶೀಲಿಸುತ್ತಿರುವುದು.
ಇಂಡಿ ತಾಲೂಕಿನ ಸಾವಳಸಂಗ ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಗ್ನಿಗಾಹುತಿಯಾದ ಗಿಡಗಳನ್ನು ವಲಯ ಅರಣ್ಯಾಧಿಕಾರಿ ಮಂಜುನಾಥ ಧೂಳೆ, ಶಿವರುದ್ರಪ್ಪ ಕಬಾಡಿಗ ಪರಿಶೀಲಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾವಳಸಂಗ ಗುಡ್ಡದಲ್ಲಿ ಅಗ್ನಿ ಅವಘಡ
  • ಖಾಸಗಿ ಕಂಪನಿಯ ದಿವ್ಯ ನಿರ್ಲಕ್ಷೃ
ಇಂಡಿ: ತಾಲೂಕಿನಲ್ಲಿ ಬೀಸಿದ ಭಾರಿ ಬಿರುಗಾಳಿಗೆ ಸಾವಳಸಂಗ ಅರಣ್ಯ ಪ್ರದೇಶದಲ್ಲಿರುವ ಎರಡು ಸಾವಿರಕ್ಕೂ ಅಧಿಕ ಗಿಡಗಳು ಅಗ್ನಿಗಾಹುತಿಯಾಗಿವೆ.
ಗುರುವಾರ ಸಂಜೆ 6ರ ಸುಮಾರಿಗೆ ಈ ಘಟನೆ ನಡೆದಿದ್ದು, ಇದೀಗ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗತೊಡಗಿದೆ.
ಸಾವಳಸಂಗ ಗುಡ್ಡದ ಮೇಲೆ ಮೈತ್ರಾ ವಾಯು ಕೃಷ್ಣಾ ಲಿಮಿಟೆಡ್ ಖಾಸಗಿ ಕಂಪನಿಯವರು ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುತ್ತಾರೆ. ವಿದ್ಯುತ್ ಯಂತ್ರದ ಕಂಬಗಳು ಮತ್ತು ವೈಯರ್ ಅರಣ್ಯ ಪ್ರದೇಶದಲ್ಲಿ ಹಾಯ್ದು ಹೋಗುತ್ತದೆ. ಗಾಳಿ ಮಳೆಗೆ ವಿದ್ಯುತ್ ಸ್ಪರ್ಶ ಆಗಿ ಸುಮಾರು 2000ಕ್ಕೂ ಹೆಚ್ಚು ಗಿಡಗಳು ಭಸ್ಮವಾಗಿವೆ.
ತಯಾರಿಕೆಯಾಗುವ ವಿದ್ಯುತ್‌ನ್ನು ಅರಣ್ಯ ಪ್ರದೇಶದ ಮಾರ್ಗವಾಗಿಯೇ ಬೇರೆ ಕಡೆಗೆ ಸಾಗಿಸುತ್ತಾರೆ. ಹಲವಾರು ಬಾರಿ ಅರಣ್ಯ ಪ್ರದೇಶದಿಂದ ವಿದ್ಯುತ್ ಹಾಯಿಸಬೇಡಿ ಎಂದು ಮನವಿ ಪತ್ರ ನೀಡಿ, ಸಾಕಷ್ಟು ಬಾರಿ ಮೌಖಿಕವಾಗಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ಮಂಜುನಾಥ ಧೂಳೆ ತಿಳಿಸಿದರು. ಬೆಂಕಿ ಅನಾಹುತಕ್ಕೆ ಮೊಲ, ಮುಂಗುಸಿ, ಹಂದಿ, ಬೆಕ್ಕು, ಹಾವು ಮತ್ತಿತರ ಜೀವ ಜಂತುಗಳು ಹಾಗೂ ಅನೇಕ ಪಕ್ಷಿಗಳ ಗೂಡುಗಳು ಸುಟ್ಟಿವೆ. ವನ್ಯ ಜೀವಿ ರಕ್ಷಣೆ ಕಾಯ್ದೆ ಅಪರಾಧದ ಅಡಿ ಮೋಕದ್ದಮೆ ದಾಖಲಿಸಲಾಗಿದೆ. ಇಂಡಿ ಅರಣ್ಯ ಇಲಾಖೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಶಿವರುದ್ರಪ್ಪ ಕಬಾಡಿಗ ಭೇಟಿ ನೀಡಿದ್ದಾರೆ.
ಇಂಡಿಯಿಂದ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸುವಲ್ಲಿ ಸಹಕರಿಸಿದ್ದಾರೆ. ಇಲ್ಲದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಮಂಜುನಾಥ ಧುಳೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net