ಪ್ರಮುಖ ಮುಖ್ಯಾಂಶಗಳು.ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸಿ.ಕೊಟ್ಟೂರು: ಕಾಲುಬಾಯಿ ರೋಗ ನಿಯಂತ್ರಣಕ್ಕೆ ತಾಲೂಕಿನಲ್ಲಿ ಶೇ.96 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಚಂದ್ರನಾಯ್ಕ ಹೇಳಿದರು. .ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ ಹಾಕಲು ಮುಂದಾಗಿದ್ದು, ತಾಲೂಕಿನ 17 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. .ಕಾಲುಬಾಯಿ ಜಾನುವಾರುಗಳಲ್ಲಿ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ ಎಂದರು. .ಉಜ್ಜಯಿನಿ ಪಶುವೈದ್ಯಾಧಿಕಾರಿ ಕೊಟ್ರೇಶ, ಹಿರಿಯ ಪಶು ಪರೀಕ್ಷಕ ಯೋಗೀಶ್ವರ ದಿನ್ನೆ, ಮಲ್ಲಿಕಾರ್ಜುನ, ಪಶು ಪರೀಕ್ಷಕಿ ಎಸ್.ಚಂದನ, ಸಿಬ್ಬಂದಿ, ರೈತರಿದ್ದರು.