_1782390123325.webp?w=480&auto=format%2Ccompress&fit=max)
_1782390123325.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಸುಮಾರು1.5 ಕೋಟಿಜನಸಂಖ್ಯೆ ಇರುವ ಬೆಂಗಳೂರಿಗೆನಿತ್ಯ ಟನ್‌ಗಟ್ಟಲೆ ತರಕಾರಿಯಅವಶ್ಯಕತೆ ಇದೆ.ಆದರೆ ಕಳೆದ 1ತಿಂಗಳಿನಿಂದಬೆಂಗಳೂರಿಗೆ ಬರುತ್ತಿರುವ ತರಕಾರಿಪ್ರಮಾಣದಲ್ಲಿ ಕುಸಿತ ಉಂಟಾಗಿದ್ದು,ತರಕಾರಿ ಬೆಲೆಏರಿಕೆಯಾಗಿದೆ ಎಂದು ವಿಜಯವಾಣಿನಡೆಸಿದ ರಿಯಾಲಿಟಿ ಚೆಕ್ ವೇಳೆವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಸಾಮಾನ್ಯವಾಗಿತರಕಾರಿ ಸೊಪ್ಪು ಪ್ರತಿದಿನ ಸಗಟುರೂಪದಲ್ಲಿ ನಗರಕ್ಕೆ ಬರುತ್ತದೆ.ಹಾಗೆ ಬಂದ ತರಕಾರಿಚಿಲ್ಲರೆ ರೂಪದಲ್ಲಿ ಮಾರಾಟವಾಗುತ್ತದೆ.ಆದರೆ ಕಳೆದ ಕೆಲದಿನಗಳಿಂದ ತರಕಾರಿ ಇಳುವರಿಯಲ್ಲಿಕುಸಿತ ಉಂಟಾಗಿರುವುದರಿಂದ ನಗರಕ್ಕೆಬರುತ್ತಿರುವ ತರಕಾರಿಯಲ್ಲಿಗಣನೀಯವಾಗಿ ಕುಸಿತ ಉಂಟಾಗಿದೆ.ಆದ್ದರಿಂದ ಬೆಲೆಏರಿಕೆಯಾಗಿದ್ದು,ಗ್ರಾಹಕರು ತರಕಾರಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.ಹೀಗಾಗಿ ಅಂದಿನತರಕಾರಿ ಅಂದೇ ಖಾಲಿಯಾಗುವ ಬದಲುವ್ಯಾಪಾರಿಗಳ ಬಳಿ ಉಳಿಯುತ್ತಿದೆ.ಮರುದಿನ ಆ ತರಕಾರಿ್ರೆಶ್ ಇಲ್ಲ ಎಂಬ ಕಾರಣಕ್ಕೆಗ್ರಾಹಕರು ಅದನ್ನು ಖರೀದಿಸುವುದಿಲ್ಲ.ಇದರಿಂದ ವ್ಯಾಪಾರಿಗಳುನಷ್ಟ ಅನುಭವಿಸುವಂತಾಗಿದೆ.ನಷ್ಟವನ್ನುಸರಿದೂಗಿಸಲು ಸಹಜವಾಗಿ ತರಕಾರಿಬೆಲೆಯನ್ನು ಏರಿಸುವ ಅನಿವಾರ್ಯತೆಸೃಷ್ಟಿಯಾಗಿದೆ.
ಕೆಲತರಕಾರಿಗಳ ಬೆಲೆ ತಕ್ಕಮಟ್ಟಿಗೆನಿಯಂತ್ರಣದಲ್ಲಿದೆ.ಆದರೆ ಕಡಿಮೆಅವಧಿಯಲ್ಲಿ ಹಾಳಾಗುವ ತರಕಾರಿಗಳಬೆಲೆ ಮಾತ್ರ ಏರು ಗತಿಯಲ್ಲೇಸಾಗಿದೆ. ಬೀನ್ಸ್,ಕ್ಯಾರೇಟ್,ಮೂಲಂಗಿ,ಬದನೆಕಾಯಿ ಹಾಗೂಹಸಿ ಬಟಾಣಿ ಬೆಲೆಯಲ್ಲಿ ಭಾರಿಏರಿಕೆ ಉಂಟಾಗಿದೆ.
ಕಳೆದವರ್ಷಕ್ಕೆ ಹೋಲಿಸಿದರೆ ಈ ಬಾರಿರಾಜ್ಯದಲ್ಲಿ ಮುಂಗಾರು ಕೊರತೆಉಂಟಾಗಿದೆ.ಮುಂಗಾರು ಕೊರತೆಸದ್ಯದ ತರಕಾರಿ ಬೆಲೆ ಏರಿಕೆಗೆನೇರ ಪರಿಣಾಮ ಬೀರಿಲ್ಲವಾದರೂಮುಂಬರುವ ದಿನಗಳಲ್ಲಿ ಮತ್ತಷ್ಟುಬೆಲೆ ಏರಿಕೆಯ ಆತಂಕವನ್ನು ಹುಟ್ಟುಹಾಕಿದೆ. ಈನಡುವೆ ಮಾರ್ಚ್ ಕೊನೆ ಹಾಗೂ ಏಪ್ರಿಲ್ಮೊದಲ ವಾರದಲ್ಲಿ ಸುರಿದ ಅಕಾಲಿಕಮಳೆಯಲ್ಲಿ ಸೊಪ್ಪು ಕೊಳೆತುಹೋಗಿದ್ದು ಕೂಡ ಬೆಲೆ ಏರಿಕೆ ಮತ್ತುಇಳುವರಿ ಕಡಿಮೆಯಾಗಲು ಕಾರಣಎನ್ನುವುದು ಸೊಪ್ಪು ವ್ಯಾಪಾರಿಈಶ್ವರಿ ಅವರ ಮಾತು.
ಬೆಂಗಳೂರಿಗೆಪಕ್ಕದ ತಮಿಳುನಾಡು ಹಾಗೂ ಗ್ರಾಮಾಂತರಜಿಲ್ಲೆಯ ಕೆಲ ಭಾಗಗಳಿಂದ ತರಕಾರಿಬರುತ್ತದೆ. ಮಳೆಕೊರತೆ ಉಂಟಾದರೆ ಸಹಜವಾಗಿ ಕಾವೇರಿನದಿ ನೀರಿನ ವಿವಾದ ಮುನ್ನೆಲೆಗೆಬರಲಿದೆ. ಕಾವೇರಿನೀರನ್ನು ಅವಲಂಬಿಸಿ ತಮಿಳುನಾಡುರೈತರು ತರಕಾರಿ ಬೆಳೆಯುವುದರಿಂದನೇರವಾಗಿ ತರಕಾರಿ ಬೆಳೆಯ ಮೇಲೆಬೀಳುತ್ತದೆ.ಇದರ ಜೊತೆಗೆರಾಜ್ಯದ ಪ್ರಮುಖ ರಾಜಕೀಯ ಚರ್ಚೆಗೆಕಾರಣವಾಗಿರುವ ಬಿಡದಿ ಟೌನ್‌ಶಿಪ್ಯೋಜನೆಯೂ ಕೂಡಾ ರೈತರ ಮೇಲೆದುಷ್ಪರಿಣಾಮ ಬೀರಲಿದೆ.ಬೆಂಗಳೂರಿಗೆಬರುವ ವಿವಿಧ ಸೊಪ್ಪು ಬೆಳೆಯುವರೈತರ ಈ ಭಾಗದಲ್ಲಿರುವುದರಿಂದಭೂಸ್ವಾಧೀನ ಪ್ರಕ್ರಿಯೆ ಆರಂಭವಾದರೆಅದರ ಪರಿಣಾಮ ಕೂಡಾ ಬೆಳೆಯ ಮೇಲೆಆಗುವ ಸಂಭವವಿದೆ.