

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕರ್ನಾಟಕದಪ್ರತಿಭಾವಂತ ಗೋಲ್‌ಕೀಪರ್ ಮೋಹಿತ್ಹೊನ್ನೇನಹಳ್ಳಿ ಶಶಿಕುಮಾರ್(ಮೋಹಿತ್ಎಚ್.ಎಸ್.)2026ರಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ಭಾರತ ರಾಷ್ಟ್ರೀಯ ತಂಡಕ್ಕೆಆಯ್ಕೆಯಾಗಿದ್ದಾರೆ.
ಹಾಸನಜಿಲ್ಲೆಯವರಾದ ಮೋಹಿತ್,ಕರ್ನಾಟಕದಕ್ರೀಡಾ ಶಾಲೆಗಳಲ್ಲಿ ತರಬೇತಿಪಡೆದು ರಾಷ್ಟ್ರೀಯ ಮಟ್ಟದಲ್ಲಿಗಮನಾರ್ಹ ಸಾಧನೆ ಮಾಡಿದ್ದಾರೆ.ಗೋಲ್‌ಕೀಪರ್ಆಗಿ ಅವರ ಚುರುಕುತನ,ಪೆನಾಲ್ಟಿಶೂಟ್‌ಔಟ್‌ಗಳಲ್ಲಿ ತೋರಿದ ಸ್ಥೈರ್ಯಹಾಗೂ ಪರಿಣಾಮಕಾರಿ ಪ್ರದರ್ಶನದಿಂದಭಾರತೀಯ ತಂಡದಲ್ಲಿ ಸ್ಥಾನಪಡೆದುಕೊಂಡಿದ್ದಾರೆ.
ಈಆಯ್ಕೆಯೊಂದಿಗೆ 12ವರ್ಷಗಳನಂತರ ಕರ್ನಾಟಕದ ಆಟಗಾರನೊಬ್ಬ ಪುರುಷರ ಹಾಕಿ ವಿಶ್ವಕಪ್ ತಂಡದಲ್ಲಿಸ್ಥಾನ ಪಡೆದಿರುವುದು ವಿಶೇಷವಾಗಿದೆ.ಈಹಿಂದೆ 2014ರವಿಶ್ವಕಪ್‌ನಲ್ಲಿ ಎಸ್.ವಿ.ಸುನೀಲ್ಹಾಗೂ ವಿ.ಆರ್.ರಘುನಾಥರಾಜ್ಯವನ್ನು ಪ್ರತಿನಿಧಿಸಿದ್ದರು.
ಇತ್ತೀಚೆಗೆನಡೆದ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿಮೋಹಿತ್ ‘ಪ್ಲೇಯರ್ ಆಫ್ ದಿ ಮ್ಯಾಚ್’ಪ್ರಶಸ್ತಿ ಪಡೆದಿದ್ದರು.ಜೂನಿಯರ್ಏಷ್ಯಾಕಪ್‌ನಲ್ಲಿ ಭಾರತ ಚಿನ್ನದಪದಕ ಗೆದ್ದಾಗ ‘ಟೂರ್ನಿಯ ಅತ್ಯುತ್ತಮಗೋಲ್‌ಕೀಪರ್’ ಗೌರವಕ್ಕೂಭಾಜನರಾಗಿದ್ದರು.
ಬೆಲ್ಜಿಯಂಹಾಗೂ ನೆದರ್‌ಲ್ಯಾಂಡ್ಸ್‌ನಲ್ಲಿನಡೆಯಲಿರುವ 2026ರಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿಮೋಹಿತ್ ಭಾರತದ ಗೋಲ್‌ಕೀಪರ್ ಆಗಿಕಣಕ್ಕಿಳಿಯಲಿದ್ದು,ಕರ್ನಾಟಕದಕ್ರೀಡಾಭಿಮಾನಿಗಳಲ್ಲಿ ಸಂತಸಮೂಡಿಸಿದೆ.ಮೋಹಿತ್ಆಯ್ಕೆಗೆ ಕರ್ನಾಟಕ ರಾಜ್ಯ ಹಾಕಿಸಂಸ್ಥೆ ಹಾಗೂ ಹಾಸನ ಹಾಕಿ ಅಸೋಸಿಯೇಷನ್ಶುಭ ಕೋರಿವೆ.