ನೆಲಮಂಗಲದ ರೇಣುಕಾನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಂಜುಳಾ, ಸದಸ್ಯೆ ಶಾರದಾ, ಸುಮಲತಾ, ಗೀತಾರಾಧಾ ಇದ್ದರು.
ನೆಲಮಂಗಲ : ನಗರದ ರೇಣುಕಾನಗರದ ಬಲಮುರಿ ಗಣಪತಿ ದೇವಾಲಯ ಮುಂದೆ ಬುಧವಾರ ಸಂಜೆ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ನರೇಂದ್ರ ಮೋದಿ ಅವರು ಸತತವಾಗಿ 12 ವರ್ಷದ ಸುದೀರ್ಘ ಅಧಿಕಾರ ನಡೆಸಿದ್ದ ಹಿನ್ನೆಲೆಯಲ್ಲಿ ಬಲಮುರಿ ಗಣಪತಿ ದೇವರಿಗೆ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ವಿತರಿಸಿ ಸಂಭ್ರಮಿಸಿದರು.
ಬಿಜೆಪಿ ಮಹಿಳೆ ಮೋರ್ಚ ತಾಲೂಕು ಅಧ್ಯಕ್ಷೆ ಮಂಜುಳಾ ಸುರೇಶ್ ಮಾತನಾಡಿ, ದೂರದೃಷ್ಟಿ ಚಿಂತನೆಯ ಮೋದಿ ದೇಶದ ಪ್ರಧಾನಿಯಾಗಿ 12 ವರ್ಷ ಆಡಳಿತ ನಡೆಸಿ ದಾಖಲೆ ಮಾಡಿದ್ದಾರೆ. ಮೋದಿ ಅವರು ಬಡವರಿಗೆ ವಿಶೇಷ ಯೋಜನೆ ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಆರ್ಥಿಕ, ಕೈಗಾರಿಕಾ ಬೆಳವಣಿಗೆಯಲ್ಲಿ ಮೋದಿ ಅವರ ಯೋಜನೆಗಳು ಸಫಲವಾಗಿವೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಉತ್ಪಾದನೆ, ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದರು.
ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೀಲಾ ಮಾತನಾಡಿ, ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಹ ಆಡಳಿತ ನೀಡಿದ ನರೇಂದ್ರ ಮೋದಿ ಅವರು, ಬಡವರು, ದಲಿತರು, ಮಹಿಳೆಯರು, ರೈತರ ಪರ ಅನೇಕ ಯೋಜನೆ ಜಾರಿಗೊಳಿಸಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಮುಖಂಡರಾದ ಮಂಜುನಾಥ್, ಹೇಮಲತಾ, ಜಲಜಾಕ್ಷಿ, ಮಂಜುಳಾ, ಭದ್ರಮ್ಮ, ಮಂಗಳಮ್ಮ, ರಾಜೇಶ್ ಇತರರು ಇದ್ದರು.