ದಾನಿಗಳ ನೆರವಿನಿಂದ ಮಾದರಿ ಶಾಲೆ school

ದಾನಿಗಳ ನೆರವಿನಿಂದ ಮಾದರಿ ಶಾಲೆ school
ದಾನಿಗಳ ನೆರವಿನಿಂದ ಮಾದರಿ ಶಾಲೆ school
Published on
ಶ್ರೀನಿವಾಸಪುರ: ನಂಬಿಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು, ಎಸ್​ಡಿಎಂಸಿ ಸಮಿತಿಯವರು ದಾನಿಗಳನ್ನು ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮಾದರಿ ಶಾಲೆೆಯಾಗಿ ರೂಪುಗೊಂಡಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ ತಿಳಿಸಿದರು. school
ತಾಲೂಕಿನ ನಂಬಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಸರ್ಕಾರಿ ಶಾಲೆಗಳು ಅಳಿವು&-ಉಳಿವಿನ ಹಂತಕ್ಕೆ ತಲುಪಿವೆ. ಆದರೆ ನಂಬಿಹಳ್ಳಿ ಗ್ರಾಮದ ಪಾಲಕರು ಮತ್ತು ಶಿಕ್ಷಕರ ಬದ್ಧತೆ, ಕ್ರಿಯಾಶೀಲತೆಯಿಂದ ಮಕ್ಕಳ ದಾಖಲಾತಿ ಹೆಚ್ಚಿದೆ. ಪ್ರತಿ ವರ್ಷ ದಾನಿಗಳಿಂದ ಶಿಕ್ಷಣಕ್ಕೆ ಅಗತ್ಯವಿರುವ ಪರಿಕರ ಪಡೆದು ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದು, ಶಾಲೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ ಎಂದು ತಿಳಿಸಿದರು.
ಕೆ.ಸಿ.ಶ್ರೀನಿವಾಸ್​, ಸಮಾಜ ಸೇವಕ ವೆಂಕಟೇಶ್​ ಬಾಬು, ದುಗ್ಗನಕುಂಟೆ ಶಿವಣ್ಣ, ಇಂದ್ರಾಣಿ, ಅಂಬರಿಶ, ಎಸ್​ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಪ ಮಾಜಿ ಸದಸ್ಯ ನರಸಿಂಹಪ್ಪ, ಮುಖ್ಯಶಿಕ್ಷಕ ರಾಮಚಂದ್ರಪ್ಪ, ಸಹ ಶಿಕ್ಷಕರಾದ ಎನ್​.ವಿ.ವೇಣುಗೋಪಾಲ, ಶಾರದಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net