ಗುಂಪುಹಲ್ಲೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಯುವಕನಿಗೆ ಥಳಿಸಿದಕ್ಕೆ ಹೈಕೋರ್ಟ್​ ಅಸಮಾಧಾನ
  • ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ
ಬೆಂಗಳೂರು: ನಾವು ಕಾನೂನಿನ ಆಡಳಿತವಿರುವ ನಾಗರಿಕ ಸಮಾಜದಲ್ಲಿ ಜೀವಿಸುತ್ತಿದ್ದೇವೆಯೇ ಹೊರತು, ಅನಾಗರಿಕ ಆಡಳಿತದಲ್ಲಿ ಅಲ್ಲ. ವಿವಾದಗಳನ್ನು ಕಾನೂನು ಪ್ರಕಾರವೇ ಬಗೆಹರಿಸಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯ. ಯಾವುದೇ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಗುಂಪು ಹಲ್ಲೆ ನಡೆಸಿ ನ್ಯಾಯಾಧೀಶರಂತೆ ವರ್ತಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್​ ಹೇಳಿದೆ.
ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ಅಂಬೇಡ್ಕರ್​ ಭಾವಚಿತ್ರಕ್ಕೆ ಸೆಗಣಿ ಬಳಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಚಂದ್ರು ಎಂಬಾತ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮುರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಘಟಣೆ ಬಳಿಕ ಗ್ರಾಮಸ್ಥರು ಆರೋಪಿ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣವನ್ನು ನಿರ್ವಹಿಸಲು ದೇಶದಲ್ಲಿ ಕಾನೂನು ವ್ಯವಸ್ಥೆಯಿದೆ. ಅದನ್ನು ಮೀರಿ ವರ್ತಿಸುವುದು ತಪು$್ಪ. ಸಾರ್ವಜನಿಕವಾಗಿ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಟನೆಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಯುವಕನ ಮೇಲಿರುವ ಆರೋಪ ಗಂಭೀರವಾಗಿದೆ. ಹಾಗೆಂದ ಮಾತ್ರಕ್ಕೆ ಸಾರ್ವಜನಿಕರು ಹಲ್ಲೆ ಮಾಡುವುದು ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪೊಲೀಸರ ನಡೆಗೂ ಖಂಡನೆ:

ಅರ್ಜಿದಾರನ ಪರ ವಾದಿಸಿದ ವಕೀಲರು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೂಡ ಈ ಪ್ರಕರಣದಲ್ಲಿ ತಮ್ಮ ವ್ಯಾಪ್ತಿ ಮೀರಿ ವರ್ತಿಸಿದ್ದಾರೆ. ಯುವಕನ ಮೇಲೆ ಪ್ರತಿ ವರ್ಷ ಎ್​ಐಆರ್​ ಹಾಕುವುದಾಗಿ, ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡುವುದಾಗಿ, ರೌಡಿಶೀಟರ್​ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಅವರು ಸಲ್ಲಿಸಿದ ವಿಡಿಯೋ ದಾಖಲೆಗಳನ್ನು ವೀಸಿದ ನ್ಯಾಯಪೀಠ, ಯಾವ ನಿಯಮದಡಿಯಲ್ಲಿ ಎಸ್​ಪಿ ಅವರು ಜನಸಮೂಹದ ಮುಂದೆ ಇಂತಹ ರಾಜಕೀಯ ಮಾದರಿಯ ಹೇಳಿಕೆಗಳನ್ನು ನೀಡಲು ಸಾಧ್ಯ. ಪೊಲೀಸರು ನಿಷ್ಪಕ್ಷಪಾತವಾಗಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕೇ ಹೊರತು ರಾಜಕಾರಣಿಗಳಂತೆ ಆಶ್ವಾಸನೆ ನೀಡಬಾರದು. ಎಲ್ಲ ಕಡೆಗಳಲ್ಲಿ ಸಿಸಿಟಿವಿ ಇದ್ದರೆ ಉತ್ತಮ. ಆಗಲಾದರೂ ಪೊಲೀಸ್​ ದೌರ್ಜನ್ಯಗಳು ಕಡಿಮೆಯಾಗಬಹುದು ಎಂದು ಹೇಳಿತು.
ℹ️

ತನಿಖಾ ವರದಿ ಸಲ್ಲಿಸಲು ಸೂಚನೆ 

ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಅರ್ಜಿದಾರರ ವಕೀಲರು ವಾದಿಸಿದರು. ಸರ್ಕಾರದ ವಕೀಲರು ಪ್ರತಿಕ್ರಿಯೆ ಸಲ್ಲಿಸಿ, ಅರ್ಜಿದಾರನ ವಿರುದ್ಧ ಮತ್ತು ಆತನಿಗೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಎರಡೂ ಕೂಡ ಅಪರಾಧವಾಗಿದ್ದು, ಪ್ರಕರಣಗಳ ತನಿಖಾ ವರದಿಯನ್ನು ಮುಂದಿನ ವಿಚಾರಣೆಯೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಪೊಲೀಸರಿಗೆ ಸೂಚಿಸಿತು. ಅರ್ಜಿದಾರರು ಪಟ್ಟಿ ಮಾಡಿರುವ ನೂರು ಮಂದಿಯನ್ನು ವಿಚಾರಣೆ ನಡೆಸುವ ಬಗ್ಗೆ ಪರಿಶೀಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net