ಶಾಸಕರಿಂದ 16 ನಗರ ಹೊಸ ಬಸ್‌ಗಳಿಗೆ ಚಾಲನೆ

ರಾಯಚೂರಿನ ಕೆಕೆಆಆರ್‌ಟಿಸಿ ಮೂರನೇ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ 16 ನಗರ ಸಾರಿಗೆ ಬಸ್ಸುಗಳಿಗೆ ಪೂಜಾ ಕಾರ್ಯಕ್ರಮಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಶುಕ್ರವಾರ ಚಾಲನೆ ನೀಡಿದರು. ಉಪ ವಿಭಾಗದ ಸಂಚಾರಿ ನಿಯಂತ್ರಾಧಿಕಾರಿ ಚಂದ್ರಶೇಖರ ಕೆ.ಎಲ್., ವಿಭಾಗದ ತಾಂತ್ರಿಕ ಅಭಿಯಂತರ ನಾಗರಾಜ್ ವರಾದ್, ಆಡಳಿತ ಅಧಿಕಾರಿ ದೇವರಾಜ್, ಡಿಪೋ ವ್ಯವಸ್ಥಾಪಕ ನಾನೇಗೌಡ, ಭದ್ರತಾ ಮತ್ತು ಜಾಗೃತಿ ಅಧಿಕಾರಿ ಶ್ರೀನಿವಾಸ,ರವೀಂದ್ರ ಜಲ್ದಾರ್ ಇದ್ದರು.

Published on

ರಾಯಚೂರು ನಗರದ ವಿವಿಧೆಡೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 16 ನಗರ ಹೊಸ ಬಸ್‌ಗಳಿಗೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದ ಕೆಕೆಆಆರ್‌ಟಿಸಿ ಮೂರನೇ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ 16 ನಗರ ಸಾರಿಗೆ ಬಸ್ಸುಗಳಿಗೆ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ನಗರ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮೇ ಟಾಟಾ ಮೋಟಾರ್ಸ್ ತಯಾರಿಕೆಯ ಹೊಸ ನಗರ ಸಾರಿಗೆ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿರುವುದು ಸಂತಷದ ಸಂಗತಿಯಾಗಿದೆ.

ಈ ಬಸ್‌ಗಳಿಗೆ 187 ಎಚ್‌ಪಿ. ಸಾಮರ್ಥ್ಯದ ಬಿಎಸ್-6 ಎಂಜಿನ್‌ಗಳನ್ನು ಅಳವಡಿಸಲಾಗಿದ್ದು, ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಎಐಎಸ್-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ. ಒಟ್ಟು 40 ಪ್ರಯಾಣಿಕ ಆಸನಗಳನ್ನು ಹೊಂದಿದ್ದು, ಎಲ್‌ಇಡಿ ಟ್ಯೂಬ್ ಲೈಟ್ ಅಳವಡಿಸುವುದರೊಂದಿಗೆ ಒಳಾಂಗಣವನ್ನು ಉತ್ತಮವಾಗಿ ವಿನ್ನಾಗೊಳಿಸಲಾಗಿದೆ ಎಂದರು.

ಈ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು ನಾಲ್ಕು ಸಿ.ಸಿ. ಕ್ಯಾಮೆರಾಗಳನ್ನು ಆಳವಡಿಸಿಲಾಗಿದ್ದು, ಸರಿಯಾಗಿ ಉಪಯೋಗಿಸಬೇಕೆಂದು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ನೂತನ ಬಸ್‌ಗಳಲ್ಲಿ ಸಂಚರಿಸಿ ಬಸ್‌ಗಳ ಗುಣಮಟ್ಟ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗದ ಸಂಚಾರಿ ನಿಯಂತ್ರಾಧಿಕಾರಿ ಚಂದ್ರಶೇಖರ ಕೆ.ಎಲ್., ವಿಭಾಗದ ತಾಂತ್ರಿಕ ಅಭಿಯಂತರ ನಾಗರಾಜ್ ವರಾದ್, ಆಡಳಿತ ಅಧಿಕಾರಿ ದೇವರಾಜ್, ಡಿಪೋ ವ್ಯವಸ್ಥಾಪಕ ನಾನೇಗೌಡ, ಭದ್ರತಾ ಮತ್ತು ಜಾಗೃತಿ ಅಧಿಕಾರಿ ಶ್ರೀನಿವಾಸ,ರವೀಂದ್ರ ಜಲ್ದಾರ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net