ಕೆರೆ ತುಂಬಿಸುವ ಯೋಜನೆಯಿಂದ ಅನುಕೂಲ
| ಪಟ್ಟಣಕುಡಿ ಕೆರೆ ವಿಕ್ಷಿಸಿದ ಶಾಸಕ ಗಣೇಶ ಹುಕ್ಕೇರಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ತಾಲೂಕಿನ ಪಟ್ಟಣಕುಡಿ ಗ್ರಾಮಕ್ಕೆ ಸೋಮವಾರ ಶಾಸಕ ಗಣೇಶ ಹುಕ್ಕೇರಿ ಭೇಟಿ ನೀಡಿ ಇಲ್ಲಿನ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಹಾಗೂ ಕೆರೆಗೆ ಹರಿದು ಬರುತ್ತಿರುವ ನೀರಿನ ವ್ಯವಸ್ಥೆ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು ವೇದಗಂಗಾ ಹಾಗೂ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿದಾಗಿದ್ದು, ಪಟ್ಟಣಕುಡಿ, ವಾಳಕಿ, ನಾಯಿಂಗ್ಲಜ, ಚಿಂಚಣಿ, ಚಿಕ್ಕೋಡಿ (ಹಾಲಟ್ಟಿ), ಮಲಿಕವಾಡ, ಬಾನಂತಿಕೋಡಿ, ಜೋಡಕುರಳಿ ಹಾಗೂ ಕಾಡಾಪುರ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಮೂಲಕ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜತೆಗೆ ಕೃಷಿಗೂ ಅಗತ್ಯ ನೀರು ಲಭ್ಯವಾಗಲಿದೆ ಎಂದರು.
ಕ್ಷೇತ್ರದ ಪ್ರತಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ತಂದೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಮಾರ್ಗದರ್ಶನದಲ್ಲಿ ಕುಡಿಯುವ ನೀರು,ರಸ್ತೆ ಸೇರಿ ಮೂಲಸೌಕರ್ಯ ಒದಗಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ವಿನೋದ ಕಾಗೆ, ಸುಕುಮಾರ ಡಿಗ್ರೆ, ಪ್ರವೀಣ ಯಮಕನಮರಡಿ, ವಿಲಾಸ ನಾಯಕ, ವಿಜಯ ಗಾವಡೆ ಇತರರಿದ್ದರು.
---
ಕೋಟ್-
ಚಿಕ್ಕೋಡಿ ತಾಲೂಕಿನಲ್ಲಿರುವ ಕೆರೆ ತುಂಬಿಸುವ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ.ಹಾಗೂ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶಾಸಕ ಗಣೇಶ ಹುಕ್ಕೇರಿ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ.ಈ ಮೂಲಕ ರೈತರ ಬಹುದಿನಗಳ ಬೇಡಿಕೆ ಈಡೇರಿದೆ.
ಪ್ರಕಾಶ ಹುಕ್ಕೇರಿ,
ವಿ.ಪ ಸದಸ್ಯರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ