ರಂಗನಾಥ್ ವಿರುದ್ಧ ಬೆಂಬಲಿಗರು, ನೀರಾವರಿ ಹೋರಾಟಗಾರರು ಆಕ್ರೋಶ
]ಗುಬ್ಬಿ:
ತಾಲೂಕಿನಲ್ಲಿ ಡಿಸಿಎಂ ಬರವೀಕ್ಷಣೆ ವೇಳೆ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ
pressmeet
ಅವರಿಗೆ ದಿಢೀರ್ ಘೇರಾವ್ ಹಾಕಿರುವುದು ಕುಣಿಗಲ್ ಶಾಸಕ ರಂಗನಾಥ್ ಅವರ ಪೂರ್ವನಿಯೋಜಿತ ಯೋಜನೆ ಎಂದು ಶಾಸಕ ಎಂ.ಟಿ.ಕೃಷ್ಣ್ಣಪ್ಪ ಅವರ ಬೆಂಬಲಿಗರು, ನೀರಾವರಿ ಹೋರಾಟಗಾರರು ಆರೋಪಿಸಿದ್ದಾರೆ.
ತಾಲೂಕಿಗೆ ಬಂದ ತುರುವೇಕೆರೆ ಶಾಸಕ ಕೃಷ್ಣಪ್ಪ ಅವರನ್ನು ಶಾಸಕ ರಂಗನಾಥ್ ಟೀಕಿಸಿ, ಪೈಪ್ಲೈನ್ ವಿಚಾರವನ್ನು ತಿರುಚಿ ಹೇಳಿ ಅಲ್ಲಿದ್ದ ಬೆಂಬಲಿಗರನ್ನು ಪ್ರಚೋದಿಸಿ ಘೇರಾವ್ ಮಾಡಿಸಿದ್ದಾರೆ. ಕೃಷ್ಣಪ್ಪ ಅವರ ಹೋರಾಟ ಜಿಲ್ಲೆಯ ರೈತರ ಹಿತಕ್ಕಾಗಿ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.
ತಾಲೂಕಿಗೆ ಹಂಚಿಕೆಯ ನೀರು ಹರಿಯುತ್ತಿದೆ. ಬಾಕಿ ಇರುವ ನಾಲೆ ವಿಸ್ತರಣೆ ಮಾಡಿಸಿ ಮೊದಲು ಅವರೇ ನೀರು ಹರಿಸಿಕೊಳ್ಳಲಿ. ಕುಣಿಗಲ್ಗೆ ನೀರು ಕೊಡಲು ಯಾರ ವಿರೋಧವಿಲ್ಲ. ಆದರೆ ಇಲ್ಲಿ ಸಾವಿರ ಕೋಟಿ ಲೂಟಿ ಹೊಡೆಯುವ ಯೋಜನೆ ಅನುಷ್ಠಾನಕ್ಕೆ ರೈತರನ್ನು ಎತ್ತಿಕಟ್ಟುವ ಕೆಲಸ ನಡೆದಿದೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೀರಮಾರನಹಳ್ಳಿ ನರಸೇಗೌಡ ಮಾತನಾಡಿ, ಶಾಸಕ ರಂಗನಾಥ್ ಅವರ ಗೂಂಡಾಗಿರಿ ವರ್ತನೆ ಖಂಡನೀಯ. ಅಷ್ಟಕ್ಕೂ ಕುಣಿಗಲ್ ಶಾಸಕರಿಗೆ ರಾಮನಗರ, ಮಾಗಡಿ ಬಿಡದಿ ಚಿಂತೆ ಯಾಕೆ ಎಂಬುದನ್ನು ಅಲ್ಲಿನ ರೈತರು ಯೋಚಿಸಬೇಕಿದೆ. ಮಾಗಡಿ ಸಚಿವ ಬಾಲಕೃಷ್ಣ ಅವರು ಪೈಪ್ಲೈನ್ ಕೆನಾಲ್ ಮಾಡುವುದಕ್ಕೆ ಮಂತ್ರಿಯಾಗಿದ್ದಾರಂತೆ. ಈ ರೀತಿಯ ಹೇಳಿಕೆ ಅವರ ಬೇಜವಾಬ್ದಾರಿ ತೋರುತ್ತದೆ. ಜಿಲ್ಲೆಯ ಎಲ್ಲ ಶಾಸಕರು, ರೈತ ಮುಖಂಡರೊಂದಿಗೆ ಚರ್ಚಿಸಿ ಸಾಧಕ&ಬಾಧಕಗಳ ತಿಳಿದು ಮಾತನಾಡುವುದು ಕಲಿಯಿರಿ ಎಂದು ಕಿಡಿಕಾರಿದರು. pressmeet
ಡಿಸಿಎಂ ಮುಂದೆಯೇ ಶಾಸಕರಿಗೆ ರಕ್ಷಣೆ ಇಲ್ಲದಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ತಿಳಿಯುತ್ತಿದೆ. ಕುಣಿಗಲ್ ಶಾಸಕರ ಸಂಬಂಧಿಯೇ ಸಿಎಂ ಆಗಿದ್ದಾರೆ, ನಿಮ್ಮದೇ ಸರ್ಕಾರವಿದೆ. ನಿಮ್ಮ ತಾಲೂಕಿನ ರೈತರ ಹಿತ ಕಾಪಾಡಲು ಮುಂದಾಗಿ. ಅದು ಬಿಟ್ಟು ನಮ್ಮ ಶಾಸಕರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ. 4 ಜನರನ್ನು ಬಿಟ್ಟು ಘೇರಾವ್ ಹಾಕಿಸುವುದು ಮುಖ್ಯವಲ್ಲ. ಕೃಷ್ಣಪ್ಪ ಅವರ ಬಗ್ಗೆ ನಿಮ್ಮ ತಾಲೂಕಿನ ರೈತರ ಬಳಿಯೇ ತಿಳಿಯಿರಿ.