ದೊಡ್ಡಬಳ್ಳಾಪುರದ ತಾಲ್ಲೂು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಧೀರಜ್ ಮುನಿರಾಜು ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ತಹಸೀಲ್ದಾರ್ ಮಲ್ಲಪ್ಪ, ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ, ತಾಪಂಇಒ ಮಂಜುನಾಥ ಹರ್ತಿ, ಬಿಇಒ ಶಂಕರಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಪೌರಾಯುಕ್ತ ಕಾರ್ತಿಕೇಶ್ವರ ಇತರರು ಇದ್ದರು.
ದೊಡ್ಡಬಳ್ಳಾಪುರ : ಕ್ಷೇತ್ರದ ಶಾಸಕನಾದ ಬಳಿಕ ಮೊದಲ ಪೂಜೆ ಮಾಡಿದ ರಾಜಘಟ್ಟ ಕೆರೆ ಏರಿ ರಸ್ತೆ ಮತ್ತು ವಾಣಿಗರಹಳ್ಳಿಯಿಂದ ಕನಕೇನಹಳ್ಳಿ ರಸ್ತೆ ಕಾಮಗಾರಿ ಆರಂಭವಾಗಿ ಎರಡೂವರೆ ವರ್ಷ ಕಳೆದರೂ ಈವರೆಗೂ ಪೂರ್ಣವಾಗಿಲ್ಲ. ಕಳೆದ ವರ್ಷ ಗ್ರಾಮಾಂತರ ಭಾಗದಲ್ಲಿ ಗುಂಡಿಗಳನ್ನು ಮುಚ್ಚದೆಯೇ ಶೇ.1 ಕೆಲಸ ಮಾಡದೆ ಬಿಲ್ ಮಾಡಿಕೊಂಡಿದ್ದೀರಿ. ನಿರ್ವಹಣಾ ವೆಚ್ಚ 6 ಕೋಟಿ ರೂ. ಬಳಕೆ ಮಾಡದೆ ವಾಪಸ್ ಕಳಿಸಿದ್ದೀರಿ ಎಂದು ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ ವಿರುದ್ಧ ಶಾಸಕ ಧೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೆಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕು, ಅರಳುಮಲ್ಲಿಗೆ ಕೆರೆ ಏರಿ ರಸ್ತೆ ಅಭಿವೃದ್ಧಿ ಮಾಡಿ ಒಂದು ವರ್ಷ ಪೂರೈಸುವ ಮೊದಲೇ ಕಿತ್ತುಹೋಗಿದೆ. ತಾಲೂಕು ಕಚೇರಿಯಲ್ಲಿ ಲಿಫ್ಟ್ ಇಲ್ಲ, ನಿರ್ವಹಣೆ ಇಲ್ಲ.
ರಾಜ್ಯದಲ್ಲಿಯೇ ಹೆಚ್ಚು ಆದಾಯ ನೀಡುತ್ತಿರುವ ಸಬ್ರಿಜಿಸ್ಟ್ರಾರ್ ಕಚೇರಿಗೆ ಶೌಚಗೃಹ ಇಲ್ಲ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಗರಂ ಆದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ ಅವರು, ಇಲಾಖೆಯಿಂದ ಹಣ ಬಂದಿಲ್ಲವೆಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಶೀಘ್ರವೇ ನೋಟಿಸ್ ನೀಡಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸುತ್ತೇನೆ. ತಾಲೂಕು ಕಚೇರಿ ಮತ್ತು ಸಬ್ರಿಜಿಸ್ಟ್ರಾರ್ಕಚೇರಿಗಳನ್ನು ನಮ್ಮ ಇಲಾಖೆಯವರು ನಿರ್ವಹಣೆ ಮಾಡುತ್ತಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯ 23 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಎಲ್ಲ ಕಾಮಗಾರಿ ಸಂಪೂರ್ಣವಾಗಿ ಮುಂದಿನ ಒಂದು ತಿಂಗಳಲ್ಲಿ ಮುಗಿಸಬೇಕು ಎಂದು ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದರು. ಬೆಸ್ಕಾಂ ಇಲಾಖೆಯಡಿ ಸುಮಾರು 5 ಕೋಟಿ ರೂ.ಗಳ ಕೇಬಲ್ ಅಳವಡಿಕೆ ಕಾಮಗಾರಿಯನ್ನ ಶೀಘ್ರವಾಗಿ ಮುಗಿಸಬೇಕು ಮತ್ತು ಮೀಟರ್ ರೀಡಿಂಗ್ ನಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಿ ಎಂದು ಬೆಸ್ಕಾಂ ಎಇಇ ಮಂಜುನಾಥಗೆ ಹೇಳಿದರು.
ಬೆಳೆ ಹಾನಿ ಇಲ್ಲ : ಕೃಷಿ ಇಲಾಖೆಯ ರಾಘವೇಂದ್ರ ಮಾತನಾಡಿ, ತಾಲೂಕಿನಲ್ಲಿ 21,892 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಯಾವುದೇ ರೈತರ ಬೆಳೆ ಹಾನಿಯಾಗಿಲ್ಲ. 287 ಹೆಕ್ಟೇರ್ನಲ್ಲಿ ತೊಗರಿ ಬೆಳೆ ಇದೆ. ಬಿತ್ತನೆ ಬೀಜ ವಿತರಣೆ ಸಂಪೂರ್ಣವಾಗಿ ನಡೆದಿದೆ.ಫ್ರೂಟ್ಸ್ ಐಡಿ ನೋಂದಣಿ ಶೇ.56 ಆಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟುಹೆಚ್ಚಿಸಲಾಗುವುದು ಎಂದರು.
ಒಣಗಿದ ಮರ, ಕಂಬಗಳ ತೆರವು ಮಾಡಿ : ಸಿಎಸ್ಆರ್ ಯೋಜನೆಯಡಿ ಶಾಲೆಗಳ ನಿಮಾರ್ಣಕ್ಕೆ ಬರುವ ಕಂಪನಿಗಳಿಗೆ ಸೂಕ್ತವಾಗಿ ಮಾರ್ಗದರ್ಶನ ನೀಡಿ ಶಾಲಾ ಆವರಣದಲ್ಲಿನ ಜಾಗವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು ಮತ್ತು ಕೊಠಡಿಗಳ ನಿಮಾರ್ಣದ ಮಾನದಂಡವನ್ನು ಅವರಿಗೆ ತಿಳಿಸಿ ಕೆಲಸ ಆರಂಭಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಅವರಿಗೆ ಶಾಸಕ ಧೀರಜ್ ಮುನಿರಾಜು ತಿಳಿಸಿದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಅವರು, ಶಾಲಾ ಆವರಣದಲ್ಲಿನ ಒಣಗಿದ ಮರಗಳು ಮತ್ತು ವಿದ್ಯುತ್ ಕಂಬಗಳ ತೆರವಿಗೆ ಮನವಿ ಮಾಡಿದರು.
ರೇಷ್ಮೆ ಇಲಾಖೆ ಜಾಗದಲ್ಲಿ ನೇಕಾರ ಭವನ ನಿರ್ಮಿಸಲು ಇಲಾಖೆಗಳ ನಡುವೆ ಸಮನ್ವಯ ನಡೆಯುತ್ತಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ಇದನ್ನು ಜರೂರಾಗಿ ಮಾಡಬೇಕು ಎಂದು ಶಾಸಕ ಧೀರಜ್ ಸೂಚನೆ ನೀಡಿದರು. ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಮರುವಿಂಗಡಣೆಯ ಪ್ರಗತಿ ನೀಡುವಂತೆ ಟಿಎಚ್ಒಗೆ ಶಾಸಕ ಧೀರಜ್ಮುನಿರಾಜು ತಿಳಿಸಿದರು.