ವಸತಿ ಯೋಜನೆ ಅನುದಾನ ದುರ್ಬಳಕೆ

Misuse of housing scheme funds
Misuse of housing scheme funds
Published on
ಚಿಂತಾಮಣಿ: ಬಸವ ವಸತಿ ಯೋಜನೆಯಡಿ ಮಂಜೂರಾದ ಹಣವನ್ನು ಬೇರೆ ಖಾತೆಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಮುನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಆಲಂಬಗಿರಿ ನಿವಾಸಿ ವರಲಕ್ಷ$್ಮಮ್ಮ ಎಂಬುವವರು ಜಿಪಂ ಸಿಇಒ ನವೀನ್​ ಭಟ್​ಗೆ ಸೋಮವಾರ ದೂರು ನೀಡಿದ್ದಾರೆ.
ವರಲಕ್ಷ್ಮಮ್ಮಗೆ ಸರ್ಕಾರದಿಂದ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. ಯೋಜನೆ ಮಂಜೂರು ಮಾಡಲು ಪಿಡಿಒ ಹಾಗೂ ಅಧಿಕೃತ ಸರ್ವೇಯರ್​ ಸೇರಿ ಹಲವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ವರಲಕ್ಷ$್ಮಮ್ಮ ೋನ್​ಪೇ ಮೂಲಕ ಹಾಗೂ ನಗದು ಹಣ ಪಾವತಿಸಿದ್ದರು.
ಆದರೆ 2025ರ ಮಾ.26ರಂದು ಪಿಡಿಒ ಹಾಗೂ ಸರ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಡಿಪಾಯ ಪರಿಶೀಲಿಸಿದ್ದರು. ಆದರೆ, ಸರ್ಕಾರದ ಅನುದಾನವನ್ನು ಫಲಾನುಭವಿಯ ಬ್ಯಾಂಕ್​ ಖಾತೆಗೆ ಜಮೆ ಮಾಡುವ ಬದಲು, ಅಕ್ರಮವಾಗಿ ಬೇರೆ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪಿಡಿಒ ಕರಿಬಸಪ್ಪ ಹಾಗೂ ತಾಪಂ ಇಒ ಎಸ್​.ಆನಂದ್​ಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನನವಾಗಿಲ್ಲ ಎಂದು ವರಲಕ್ಷಮ್ಮ ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net