ಮಿರರ್ಲೆಸ್ ತಂತ್ರಜ್ಞಾನ ಸಹಕಾರಿ

ವಿಜಯಪುರದ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಸ್ಟರ್ ಕ್ಲಾಸ್ ಆನ್ ನಿಕಾನ್ ಮಿರರ್ಲೆಸ್ ಟೆಕ್ನಾಲಜಿ ವಿಷಯ ಕುರಿತ ರಾಷ್ಟ್ರೀಯ ಮಟ್ಟದ ವಿಶೇಷ ತಾಂತ್ರಿಕ ಕಾರ್ಯಾಗಾರಕ್ಕೆ ಗಣ್ಯರು ಚಾಲನೆ ನೀಡಿದರು. ಧ್ರುವ ಪಾಟೀಲ, ಗಗನ ಹಿರೇದೇಸಾಯಿ, ಮಂಜುನಾಥ ಪಿ. ಮತ್ತಿತರರಿದ್ದಾರೆ.
ವಿಜಯಪುರದ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಸ್ಟರ್ ಕ್ಲಾಸ್ ಆನ್ ನಿಕಾನ್ ಮಿರರ್ಲೆಸ್ ಟೆಕ್ನಾಲಜಿ ವಿಷಯ ಕುರಿತ ರಾಷ್ಟ್ರೀಯ ಮಟ್ಟದ ವಿಶೇಷ ತಾಂತ್ರಿಕ ಕಾರ್ಯಾಗಾರಕ್ಕೆ ಗಣ್ಯರು ಚಾಲನೆ ನೀಡಿದರು. ಧ್ರುವ ಪಾಟೀಲ, ಗಗನ ಹಿರೇದೇಸಾಯಿ, ಮಂಜುನಾಥ ಪಿ. ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವನ್ಯಜೀವಿ ಮಂಡಳಿಯ ಸದಸ್ಯ ಧ್ರುವ ಎಂ. ಪಾಟೀಲ ಅಭಿಮತ
  • ವಿಶೇಷ ತಾಂತ್ರಿಕ ಕಾರ್ಯಾಗಾರ
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿಭಾಗ, ಆರ್ಯನ್ ಡಿಜಿಟಲ್ ಲ್ಯಾಬ್ ಹಾಗೂ ನಿಕಾನ್ ಸ್ಕೂಲ್ ಇಂಡಿಯಾ ಸಹಯೋಗದಲ್ಲಿ ಮಾಸ್ಟರ್ ಕ್ಲಾಸ್ ಆನ್ ನಿಕಾನ್ ಮಿರರ್ಲೆಸ್ ಟೆಕ್ನಾಲಜಿ ವಿಷಯ ಕುರಿತು ರಾಷ್ಟ್ರೀಯ ಮಟ್ಟದ ವಿಶೇಷ ತಾಂತ್ರಿಕ ಕಾರ್ಯಾಗಾರ ಮಂಗಳವಾರ ನಡೆಯಿತು.

ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯ ಧ್ರುವ ಎಂ. ಪಾಟೀಲ, ನಿಕಾನ್ ಪ್ರೈ.ಲಿ. ಸಂಸ್ಥೆಯ ತಾಂತ್ರಿಕ ತಜ್ಞ ಸ್ಟೆರಿನ್, ಆರ್ಯನ್ ಡಿಜಿಟಲ್ ಲ್ಯಾಬ್ ಮಾಲೀಕ ಹಾಗೂ ಅಧಿಕೃತ ನಿಕಾನ್ ಡೀಲರ್ ಆದ ಗಗನ ಹಿರೇದೇಸಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧ್ರುವ ಎಂ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಮತ್ತು ಛಾಯಾಗ್ರಾಹಕರಿಗೆ ಫೋಟೊಗ್ರಾಫಿಯ ಮಹತ್ವ, ತಂತ್ರಗಳು, ಚಿತ್ರ ಸೆರೆ ಹಿಡಿಯುವಾಗ ಅಗತ್ಯವಿರುವ ಕೋನಗಳು, ಬೆಳಕು ಮತ್ತಿತರ ವೈಜ್ಞಾನಿಕ ಅಂಶಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಪ್ರಾಚಾರ್ಯ ಮಂಜುನಾಥ ಪಿ. ಇಂತಹ ತಾಂತ್ರಿಕ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ವೃದ್ಧಿಸುವುದರ ಜತೆಗೆ ಕೈಗಾರಿಕೆ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿವೆ.
ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತಜ್ಞರು ನಿಕಾನ್ ಮಿರರ್ಲೆಸ್ ಕ್ಯಾಮರಾಗಳ ಅತ್ಯಾಧುನಿಕ ತಂತ್ರಜ್ಞಾನ, ಕ್ಯಾಮರಾದ ಕಾರ್ಯವಿಧಾನ, ಆಧುನಿಕ ಛಾಯಾಗ್ರಹಣ ತಂತ್ರಗಳು, ವನ್ಯಜೀವಿ ಛಾಯಾಗ್ರಹಣ, ಸೂಕ್ತ ಲೆನ್ಸ್ಗಳ ಆಯ್ಕೆ, ಬೆಳಕಿನ ಸಮರ್ಪಕ ಬಳಕೆ, ಡಿಜಿಟಲ್ ಇಮೇಜಿಂಗ್ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿನ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಲ್ಲದೆ, ಪ್ರಾಯೋಗಿಕ ಪ್ರದರ್ಶನದ ಮೂಲಕ ಮಿರರ್ಲೆಸ್ ಕ್ಯಾಮರಾಗಳ ವೈಶಿಷ್ಟೃಗಳು ಹಾಗೂ
ಅವುಗಳ ಪರಿಣಾಮಕಾರಿ ಬಳಕೆಯ ಸಮಗ್ರ ಅರಿವು ಮೂಡಿಸಿದರು.
ಕಾಲೇಜಿನ ಉಪ ಪ್ರಾಚಾರ್ಯೆ ಲೀನಾ ರಾಘಾ, ಕಾರ್ಯಕ್ರಮ ಸಂಯೋಜಕ ಮುರುಗೇಶ ಪಟ್ಟಣಶೆಟ್ಟಿ, ಪ್ರಾಧ್ಯಾಪಕರಾದ ಭಾಗ್ಯಶ್ರೀ ಪಾಟೀಲ, ಸುಮಂಗಲಾ ಬಾದಾಮಿ, ಎಂಬಿಎ ವಿಭಾಗದ ಮುಖ್ಯಸ್ಥ ಜಿ.ಎಸ್. ಕರಡಿ ಮತ್ತಿತರರಿದ್ದರು.
ಕಾರ್ಯಾಗಾರದಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು, ಛಾಯಾಗ್ರಾಹಕರು ಹಾಗೂ ಛಾಯಾಗ್ರಹಣಾಸಕ್ತರು ಭಾಗವಹಿಸಿದ್ದರು.
ನಂತರ ಪ್ರಾಯೋಗಿಕ ಅಧಿವೇಶನಗಳು, ತಜ್ಞರೊಂದಿಗೆ ಸಂವಾದ ಹಾಗೂ ನೇರ ಪ್ರದರ್ಶನಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net