ಚುನಾವಣಾ ಆಯೋಗದ ಸಂಘಟಿತ ಅಪರಾಧಕ್ಕೆ ಬಿಜೆಪಿ ಸಾಥ್​: ಎಸ್‌ಐಆರ್ ಪ್ರಕ್ರಿಯೆ ಕೂಡಲೇ ರದ್ದಾಗಲಿ ಎಂದ ಸಚಿವ ಯತೀಂದ್ರ ಸಿದ್ದರಾಮಯ್ಯ | SIR

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ವ್ಯವಸ್ಥಿತವಾಗಿ ಸಂಘಟಿತ ಅಪರಾಧ ನಡೆಸುತ್ತಿದ್ದು, ಇದರೊಂದಿಗೆ ಬಿಜೆಪಿಯೂ ಶಾಮೀಲಾಗಿದೆ, ಆದ್ದರಿಂದ ತಕ್ಷಣವೇ ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
 ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ
Published on: 

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ವ್ಯವಸ್ಥಿತವಾಗಿ ಸಂಘಟಿತ ಅಪರಾಧ ನಡೆಸುತ್ತಿದ್ದು, ಇದರೊಂದಿಗೆ ಬಿಜೆಪಿಯೂ ಶಾಮೀಲಾಗಿದೆ, ಆದ್ದರಿಂದ ತಕ್ಷಣವೇ ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯತೀಂದ್ರ, ಎಸ್‌ಐಆರ್ ಅಪರಾಧದಲ್ಲಿ ಬಿಜೆಪಿಯವರು ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಸ್ಲಿಮರು ಬಿಜೆಪಿಯವರಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಆ ಸಮುದಾಯದವರ ಮತಗಳನ್ನು ಡೀಲಿಟ್ ಮಾಡಿಸುತ್ತಿದ್ದು, ಈ ಕೃತ್ಯಕ್ಕೆ ಚುನಾವಣಾ ಆಯೋಗ ನೆರವಾಗಿದೆ. ಮೊದಲಿನಿಂದಲೂ ಎಸ್‌ಐಆರ್ ಬಗ್ಗೆ ನಮಗೆಲ್ಲಾ ಅನುಮಾನ ಇರುವುದರಿಂದ ತಕ್ಷಣವೇ ರಾಜ್ಯದಲ್ಲಿ ಈ ಪ್ರಕ್ರಿಯೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:UP Elections: 150 ಕ್ಷೇತ್ರಗಳಿಗೆ ಕಾಂಗ್ರೆಸ್‌ ಬೇಡಿಕೆ!...ದೋಸ್ತಿಗಳಲ್ಲಿ ಬಿರುಕು ಮೂಡಿಸುತ್ತಾ ಅಖಿಲೇಶ್ ಕೊಟ್ಟ ಆಫರ್...?

ಮುಸ್ಲಿಮರ ಮತಗಳನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿರುವ ಈ ಕೃತ್ಯದ ಬಗ್ಗೆಯೂ ಸ್ಪಷ್ಟನೆ ನೀಡಿರುವ ಸಚಿವರು, ಆ ಸಮುದಾಯದ ಮತದಾರರ ಹೆಸರಿನಲ್ಲೇ ಅವರ ಧರ್ಮ ಗೊತ್ತಾಗುವುದರಿಂದ ಮತ್ತು ಅವರೆಲ್ಲಾ ಗುಂಪು ಗುಂಪಾಗಿಯೇ ಇರುವುದರಿಂದ ಸುಲಭವಾಗಿ ಅವರ ಹೆಸರುಗಳನ್ನು ಡೀಲಿಟ್ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ಮೇಲೆ ಸಾಕಷ್ಟು ಗಂಭೀರ ಆರೋಪಗಳು ಬಂದಿದ್ದರೂ ಅವರು ಯಾವುದಕ್ಕೂ ಉತ್ತರ ನೀಡುತ್ತಿಲ್ಲ, ಬದಲಾಗಿ ಅವರನ್ನು ಪ್ರಶ್ನಿಸುವವರನ್ನೇ ಟೀಕಿಸುವ ಮೂಲಕ ರಾಜಕೀಯ ನಾಯಕರುಗಳಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ದೊಡ್ಡ ಸ್ವಾಯತ್ತ ಸಂಸ್ಥೆಯಾಗಿದ್ದು, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳು ನಡೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ ಎಂದು ಸಚಿವರು ಎಚ್ಚರಿಸಿದ್ದಾರೆ.

Also Read
ಭಿನ್ನಮತದ ಸುದ್ದಿಗೆ ಬ್ರೇಕ್​: ಕಳೆದ ವರ್ಷದ ಫೆಬ್ರವರಿಯಿಂದ ಆಯೋಗದ ಪ್ರತಿಯೊಂದು ನಿರ್ಧಾರವೂ ಒಮ್ಮತದ್ದೇ ಎಂದ ಮೂಲಗಳು! | Election Commission
 ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಫಾರ್ಮ್ 7 ರ ಮೂಲಕ ಅಕ್ರಮ!

ಫಾರ್ಮ್ 7 (Form 7) ಮೂಲಕ ಆಕ್ಷೇಪಣೆ ಸಲ್ಲಿಸಿ ದಾಖಲೆ ಕೊಟ್ಟರೆ ವೋಟರ್ ಲಿಸ್ಟ್‌ಗೆ ಮರಳಿ ಸೇರಿಸಿಕೊಳ್ಳಬಹುದು ಎನ್ನುವ ವಾದಕ್ಕೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಇದು ತಿಳಿಯುತ್ತದೆ, ಬಲ್ಕ್ ಆಗಿ (ಒಟ್ಟಾರೆಯಾಗಿ) ನೂರಾರು ಜನರ ಹೆಸರುಗಳನ್ನು ಪ್ರಿಂಟ್ ಮಾಡಿ ಫಾರ್ಮ್ 7 ಕೊಡುವುದಕ್ಕೆ ಅವಕಾಶವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟು ಜನರ ಫೋನ್ ನಂಬರ್, ವಿಳಾಸ, ಎಪಿಕ್ (EPIC) ನಂಬರ್ ಸೇರಿದಂತೆ ಎಲ್ಲಾ ಮಾಹಿತಿಗಳು ಇವರಿಗೆ ಹೇಗೆ ಸಿಗುತ್ತಿವೆ? ಇದಕ್ಕೆ ಚುನಾವಣಾ ಆಯೋಗದಿಂದಲೇ ಮಾಹಿತಿ ಬರುತ್ತಿದೆಯಾ ಅಥವಾ ಅಕ್ರಮ ನಡೆಯುತ್ತಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net