UP Elections: 150 ಕ್ಷೇತ್ರಗಳಿಗೆ ಕಾಂಗ್ರೆಸ್‌ ಬೇಡಿಕೆ!...ದೋಸ್ತಿಗಳಲ್ಲಿ ಬಿರುಕು ಮೂಡಿಸುತ್ತಾ ಅಖಿಲೇಶ್ ಕೊಟ್ಟ ಆಫರ್...?

ಲಖನೌ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ (UP Elections) ಸಿದ್ಧತೆಗಳು ಬಿರುಸುಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಲು ಪ್ರಯತ್ನಗಳನ್ನು ತೀವ್ರಗೊಳಿಸಿವೆ.
ದೋಸ್ತಿಗಳಲ್ಲಿ ಬಿರುಕು ಮೂಡಿಸುತ್ತಾ ಅಖಿಲೇಶ್ ಕೊಟ್ಟ ಆಫರ್...?
ದೋಸ್ತಿಗಳಲ್ಲಿ ಬಿರುಕು ಮೂಡಿಸುತ್ತಾ ಅಖಿಲೇಶ್ ಕೊಟ್ಟ ಆಫರ್...?
Published on: 

ಲಖನೌ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ (UP Elections) ಸಿದ್ಧತೆಗಳು ಬಿರುಸುಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಲು ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಇಂಡಿಯಾ ಮತ್ತು ಎನ್​ಡಿಎ ಮೈತ್ರಿಕೂಟದೊಳಗೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲವಾದರೂ, ಮಿತ್ರಪಕ್ಷಗಳು ಹೆಚ್ಚಿನ ಸ್ಥಾನಗಳಿಗಾಗಿ ಪಟ್ಟುಹಿಡಿಯಲಾರಂಭಿಸಿವೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕನಿಷ್ಠ 150 ಸ್ಥಾನಗಳಲ್ಲಿ ಸ್ಪರ್ಧಿಸುವ ಇರಾದೆಯಲ್ಲಿದೆ ಎಂದು ಕೈ ನಾಯಕರುಗಳೇ ಹೇಳಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಲಿಷ್ಠ ವಿಪಕ್ಷವಾಗಿರುವ ಸಮಾಜವಾದಿ ಪಕ್ಷ (ಎಸ್‌ಪಿ) ಕಾಂಗ್ರೆಸ್‌ಗೆ ಅಷ್ಟು ಸ್ಥಾನಗಳನ್ನು ನೀಡುವ ಆಲೋಚನೆಯಲ್ಲಿಲ್ಲ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ಗೆ 53 ರಿಂದ 55 ಸ್ಥಾನಗಳನ್ನು ನೀಡಲು ಎಸ್‌ಪಿ ಚಿಂತನೆ

ಮೂಲಗಳ ಪ್ರಕಾರ, ಕಾಂಗ್ರೆಸ್‌ನೊಂದಿಗೆ ಸಂಭಾವ್ಯ ಸೀಟು ಹಂಚಿಕೆ ಸೂತ್ರವನ್ನು ರೂಪಿಸುವಾಗ ಸಮಾಜವಾದಿ ಪಕ್ಷವು ಚುನಾವಣಾ ಕಾರ್ಯಕ್ಷಮತೆಯ ಮೇಲೆ ಗಮನಹರಿಸಲಿದ್ದು, ಮೈತ್ರಿಕೂಟದ ಅಡಿಯಲ್ಲಿ ಎಸ್‌ಪಿ ಕಾಂಗ್ರೆಸ್‌ಗೆ ಸುಮಾರು 53 ರಿಂದ 55 ಸ್ಥಾನಗಳನ್ನು ನೀಡಿ, ತಾನು ಸ್ವತಃ ಸುಮಾರು 350 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಮಾಜವಾದಿ ಪಕ್ಷವು ತನ್ನ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುತ್ತದೆ ಎಂದು ಮೂಲಗಳು ತಿಳಿಸಿದ್ದು, ಪ್ರಸ್ತಾವಿತ ಸೂತ್ರವು 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನೂ ಗಣನೆಗೆ ತೆಗೆದುಕೊಂಡಿದೆ. 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಆರು ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಕ್ಷೇತ್ರಗಳು 30 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದರೆ, ಕಾಂಗ್ರೆಸ್ ಸ್ಪರ್ಧಿಸಿ ಸೋತ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ 11 ವಿಧಾನಸಭಾ ಕ್ಷೇತ್ರಗಳು ಬಂದಿದ್ದವು.

ಕಾಂಗ್ರೆಸ್‌ಗೆ ಪ್ರಸ್ತಾವಿತ 53 ರಿಂದ 55 ಸ್ಥಾನಗಳ ಅಂಕಿ ಅಂಶಕ್ಕೆ ಬರುವಾಗ ಎಸ್‌ಪಿ ಈ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ನ ವಿಧಾನಸಭಾ ಮಟ್ಟದ ಕಾರ್ಯಕ್ಷಮತೆಯ ಲೆಕ್ಕಾಚಾರವನ್ನು ಬಳಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ, ಸಮಾಜವಾದಿ ಪಕ್ಷವು ತಾನು ಗೆದ್ದ 37 ಸ್ಥಾನಗಳು ಮತ್ತು ಸೋತರೂ ವಿಧಾನಸಭಾ ಮಟ್ಟದಲ್ಲಿ ಗಳಿಕೆ ದಾಖಲಿಸಿದ ಕ್ಷೇತ್ರಗಳು ಸೇರಿದಂತೆ ತನ್ನದೇ ಆದ 2024ರ ಲೋಕಸಭಾ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತಿದೆ. ಈ ಮೌಲ್ಯಮಾಪನದ ಆಧಾರದ ಮೇಲೆ ಪಕ್ಷವು ಸುಮಾರು 350 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಭಿನ್ನಮತದ ಸುದ್ದಿಗೆ ಬ್ರೇಕ್​: ಕಳೆದ ವರ್ಷದ ಫೆಬ್ರವರಿಯಿಂದ ಆಯೋಗದ ಪ್ರತಿಯೊಂದು ನಿರ್ಧಾರವೂ ಒಮ್ಮತದ್ದೇ ಎಂದ ಮೂಲಗಳು! | Election Commission

150 ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ!

ಯುಪಿ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳಿಕೊಳ್ಳುತಿದ್ದಾರೆ. ಅಲ್ಲಿನ ರಾಜ್ಯ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಮತ್ತು ಸಂಸದ ಇಮ್ರಾನ್ ಮಸೂದ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪಕ್ಷದ ಬೇಡಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸೀಟು ಹಂಚಿಕೆ ಕುರಿತ ನಡೆಯುತ್ತಿರುವ ಚರ್ಚೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಎಸ್​ಪಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸಮಾಜವಾದಿ ಪಕ್ಷದ ಒತ್ತಡಕ್ಕೆ ಮಣಿದು ತನ್ನ ಬೇಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ಸದ್ಯಕ್ಕೆ ಕಂಡುಬರುತ್ತಿಲ್ಲ.

2017ರ ಸೀಟು ಹಂಚಿಕೆ ಸೂತ್ರವೇನಿತ್ತು...?

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಆ ಸಂದರ್ಭದಲ್ಲಿ ಎರಡೂ ಪಕ್ಷಗಳು 298:105 ರ ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿದ್ದವು. ಈ ವ್ಯವಸ್ಥೆಯಡಿಯಲ್ಲಿ, ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ 298 ಸ್ಥಾನಗಳಲ್ಲಿ ಸ್ಪರ್ಧಿಸಬೇಕಿದ್ದರೆ, ಕಾಂಗ್ರೆಸ್‌ಗೆ 105 ಸ್ಥಾನಗಳನ್ನು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಈ ಸೂತ್ರವು ಕೆಲವು ಅನುಷ್ಠಾನದ ಸಮಸ್ಯೆಗಳನ್ನು ಎದುರಿಸಿತು ಮತ್ತು ಅಂತಿಮವಾಗಿ ಎರಡೂ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು. 2017ರ ಚುನಾವಣೆಯಲ್ಲಿ ಎಸ್‌ಪಿ 311 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ 114 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅಂತಿಮವಾಗಿ ಎಸ್‌ಪಿ 47 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಪಕ್ಷವು ಕೇವಲ ಏಳು ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು.

Also Read
ಗುಜರಾತ್ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆ: 9 ವರ್ಷಗಳ ನಂತರ ಕಾಂಗ್ರೆಸ್‌‌ಗೆ ಮರಳಲು ಸಜ್ಜಾದ ಮಾಜಿ ಸಿಎಂ ಶಂಕರ್‌ಸಿಂಗ್ ವಘೇಲಾ! | Shankarsinh Vaghela
ದೋಸ್ತಿಗಳಲ್ಲಿ ಬಿರುಕು ಮೂಡಿಸುತ್ತಾ ಅಖಿಲೇಶ್ ಕೊಟ್ಟ ಆಫರ್...?

ಮುಂಬರುವ ಚುನಾವಣೆಗೆ ಸೀಟು ಹಂಚಿಕೆ ಕಸರತ್ತು ಸದ್ಯದ ಮಟ್ಟಿಗೆ ಕಗ್ಗಂಟಾಗಿಯೇ ಉಳಿದಿದ್ದು, ಇದರ ಭಾಗವಾಗಿಯೇ ಎಸ್​ಪಿ ಅಧ್ಯಕ್ಷ ಅಖಿಲೇಶ್ ಯಾದವ್​ ಇತ್ತೀಚಿನ ಇಂಡಿಯಾ ಕೂಟದ ಸಭೆಗೂ ಗೈರಾಗಿದ್ದರು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷವು ಕನಿಷ್ಠ 150 ಸ್ಥಾನಗಳಲ್ಲಿ ಸ್ಪರ್ಧಿಸಲು ಪಟ್ಟುಹಿಡಿದಿದ್ದರೆ, ಸಮಾಜವಾದಿ ಪಕ್ಷವು ಚುನಾವಣಾ ಕಾರ್ಯಕ್ಷಮತೆ ಹಾಗೂ 2024ರ ಲೋಕಸಭಾ ಫಲಿತಾಂಶದ ಆಧಾರದ ಮೇಲೆ ಕೇವಲ 53 ರಿಂದ 55 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಚಿಂತಿಸಿದೆ.

ಎಸ್‌ಪಿ ತಾನು ಸ್ವತಃ ಸುಮಾರು 350 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದೆ. 2017ರ ಮೈತ್ರಿಕೂಟದ ಕಹಿ ಅನುಭವಗಳ ಹಿನ್ನೆಲೆಯಲ್ಲಿ, ಪ್ರಸ್ತುತ ಸೀಟು ಹಂಚಿಕೆ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಬಿಕ್ಕಟ್ಟು ಮುಂದುವರಿದಿದ್ದು, ಅಂತಿಮ ಒಪ್ಪಂದ ಹೇಗಿರಲಿದೆ ಎಂಬುದು ಇಡೀ ರಾಷ್ಟ್ರದ ಕುತುಹಲ ಹೆಚ್ಚಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net