ಕಲಬುರಗಿ ಐತಿಹಾಸಿಕ ಕೋಟೆ ಸಂರಕ್ಷಣೆ, ಉದ್ಯಾನವನಗಳ ಅಭಿವೃದ್ದಿ, ಪ್ರವಾಸೋದ್ಯಮ ಅಭಿವೃದ್ದಿಗಾಗಿ ಇಂಜಿನಿಯರ್ ಗಳೊಂದಿಗೆ ಸಚಿವ ಪ್ರಿಯಾಂಕ್ ಸಮಾಲೋಚನೆ
,
Published on:
Copied
Follow Us
ಕಲಬುರಗಿ : ನಗರದ ಐತಿಹಾಸಿಕ ಕೋಟೆ ಸಂರಕ್ಷಣೆ, ಉದ್ಯಾನವನಗಳ ಸೌಂದರ್ಯೀಕರಣ ಸೇರಿದಂತೆ ವಾಹನದಟ್ಟಣೆ ಸಮರ್ಪಕ ನಿರ್ವಹಣೆ ಕುರಿತಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿವಿಲ್ ಇಂಜಿನಿಯರ್, ವಾಸ್ತುಶಿಲ್ಪಿ ಹಾಗೂ ಸರ್ಕಾರದ ವಿವಿಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಬೆಂಗಳೂರು ಮೂಲದ ಆರ್ಕಿಟೆಟ್ ಇಂಜಿನಿಯರ್ ನರೇಂದ್ರ, ಸಿವಿಲ್ ಇಂಜನಿಯರ್ ಯೋಗೇಶ್ ಅವರ ತಂಡದ ಸದಸ್ಯರು ರಸ್ತೆ ವಿಸ್ತರಣೆ, ಫೈ ಓವರ್ ನಿರ್ಮಾಣ, ಹುಬ್ಬಳ್ಳಿ ಹಾಗೂ ಧಾರವಾಡ ನಡುವೆ ಸಂಚರಿಸುವ ಬಿಆರ್ ಟಿಸಿ ಮಾದರಿಯ ಬಸ್ ಸಂಚಾರದ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಐತಿಹಾಸಿಕ ಕೋಟೆ ಸಂರಕ್ಷಣೆ, ಅಪ್ಪಾ ಕೆರೆ ಅಭಿವೃದ್ದಿ, ಕೆರೆ ಭೋಸಗಾ ಅಭಿವೃದ್ದಿ, ನಗರದ ಪ್ರಮುಖ ಉದ್ಯಾನವನಗಳ ಸೌಂದರ್ಯೀಕರಣ, ಸರ್ಕಲ್ ಗಳ ವಿಸ್ತರಣೆ ಸೇರಿದಂತೆ ಪ್ರವಾಸೋದ್ಯಮದ ಅಭಿವೃದ್ದಿಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವ ಕುರಿತು ಸುಧೀರ್ಘ ವಾಗಿ ಸಚಿವರು ವಿಚಾರ ವಿನಿಯಮ ಮಾಡಿಕೊಂಡರು.
ಲೋಕೋಪಯೋಗಿ ಇಲಾಖೆ, ಜೆಸ್ಕಾಂ, ಕಂದಾಯ ಇಲಾಖೆ, ಕೆಕೆಆರ್ ಟಿಸಿ, ಕುಡಾ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಸಹಯೋಗದಿಂದ ಕಾರ್ಯಾನಿರ್ವಹಿಸಲು ಅನುಕೂಲವಾಗುವಂತೆ ಟಾಸ್ಕಫೋರ್ಸ್ ರಚನೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು ಟಾಸ್ಕಪೋರ್ಸ್ ಸಭೆ ಸೇರಿ ಚರ್ಚಿಸಬೇಕು ಹಾಗೂ ಅದರಂತೆ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಮಹಾನಗರ ಪಾಲಿಕೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬರುವ ವಾರ್ಷಿಕ ಅನುದಾನ, ಕೆಕೆಆರ್ ಡಿಬಿ ಅನುದಾನ, 16 ನೆಯ ಹಣಕಾಸು ಆಯೋಗದ ಅನುದಾನ, ಅಮೃತ್ 2.0 ಸೇರಿದಂತೆ ಇತರೆ ಮೂಲಗಳ ಬಗ್ಗೆ ಕಮೀಷನರ್ ಅವಿನಾಶ್ ಶಿಂಧೆ ಸಚಿವರಿಗೆ ಮಾಹಿತಿ ನೀಡಿದರು.
ಇಂಜಿನಿಯರ್ ಗಳ ತಂಡ ನಗರದ ಪ್ರಮುಖ ಸ್ಥಳಗಳಿಗೆ, ವಾಹನ ದಟ್ಟಣೆ ಪ್ರದೇಶಗಳಿಗೆ, ಐತಿಹಾಸಿಕ ಕೋಟೆಗೆ ಭೇಟಿ ನೀಡಿದ್ದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಕಮೀಷನರ್ ಅವಿನಾಶ್ ಶಿಂಧೆ ಸೇರಿದಂತೆ ಇತರರು ಇದ್ದರು.