ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲಿಸಿದ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

ಬೆಂಗಳೂರು ಮತ್ತು ತುಮಕೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲ್ವೇ ಯೋಜನೆಗಳ ಕುರಿತು ಸಚಿವ  ವಿ. ಸೋಮಣ್ಣ  ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಬೆಂಗಳೂರು ಮತ್ತು ತುಮಕೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲ್ವೇ ಯೋಜನೆಗಳ ಕುರಿತು ಸಚಿವ ವಿ. ಸೋಮಣ್ಣ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು, ಬೆಂಗಳೂರು ವ್ಯಾಪ್ತಿಯ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ
  • ಸಭೆ ನಡೆಸಿದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
  • ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು:ಕೇಂದ್ರ ರೈಲ್ವೆಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣನೈಋತ್ಯ ರೈಲ್ವೆ ನಿರ್ಮಾಣ ವಿಭಾಗದಹಿರಿಯ ಅಧಿಕಾರಿಗಳೊಂದಿಗೆಬೆಂಗಳೂರು ಮತ್ತು ತುಮಕೂರು ಲೋಕಸಭಾಕ್ಷೇತ್ರಗಳ ವ್ಯಾಪ್ತಿಯಲ್ಲಿನಡೆಯುತ್ತಿರುವ ಹಾಗೂ ಪ್ರಸ್ತಾವಿತರೈಲ್ವೆ ಮೂಲಸೌಕರ್ಯ ಯೋಜನೆಗಳಪ್ರಗತಿಪರಿಶೀಲಿಸಿದರು.

ಬೆಂಗಳೂರುಮತ್ತು ಮೈಸೂರು ವಿಭಾಗಗಳ ವ್ಯಾಪ್ತಿಗೆಒಳಪಡುವ ರೈಲ್ವೆ ಮೇಲ್ಸೇತುವೆ, ಕೆಳಸೇತುವೆ,ಪಾದಚಾರಿಮೇಲ್ಸೇತುವೆ ಹಾಗೂ ಪ್ರಮುಖ ಹೊಸರೈಲು ಮಾರ್ಗ ಯೋಜನೆಗಳ ಕುರಿತುಸಭೆಯಲ್ಲಿ ಪರಿಶೀಲಿಸಲಾಯಿತು.

ತುಮಕೂರುಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಸುಗಮ ಸಂಚಾರ ಮತ್ತು ಭದ್ರತೆಗಾಗಿಕೈಗೆತ್ತಿಕೊಳ್ಳಲಾಗಿರುವ 30ಕ್ಕೂಹೆಚ್ಚು ಕಾಮಗಾರಿಗಳಲ್ಲಿಪಂಡಿತನಹಳ್ಳಿ,ಮೈದಾಳ,ಬಡ್ಡಿಹಳ್ಳಿ,ಬಟವಾಡಿ,ಹೆಗ್ಗೇರೆ,ಮಲ್ಲಸಂದ್ರ,ಬೆಂಚೆಗೆರೆ,ನಿಟ್ಟೂರುಮೈಸೂರು, ನಂದಿಹಳ್ಳಿಗೇಟ್ ಸೇರಿದಂತೆ ಬಿ.ಎಚ್.ರಸ್ತೆಯ ಹಾಸನಮತ್ತು ಬಿದಿರೆಗುಡಿ ಕಡೆಗಿನಪ್ರಮುಖ ಕ್ರಾಸಿಂಗ್‌ಗಳಲ್ಲಿನಡೆಯುತ್ತಿರುವ ಮೇಲ್ಸೇತುವೆಕಾಮಗಾರಿಗಳನ್ನು 2026-27ಆರ್ಥಿಕ ವರ್ಷದೊಳಗೆಪೂರ್ಣಗೊಳಿಸುವಂತೆ ಸಚಿವರುಅಧಿಕಾರಿಗಳಿಗೆ ಸೂಚಿಸಿದರು.

ಇನ್ನುಳಿದಹಳೆಯ ಶೆಟ್ಟಿಹಳ್ಳಿ ಗೇಟ್,ಬಂಡಿಹಳ್ಳಿರಸ್ತೆ ಗೇಟ್,ದೊಣ್ಣೆರೆ ಗೇಟ್,ಡಿ.ರಾಂಪುರ ಗೇಟ್ಹಾಗೂ ಬಾದೇನಹಳ್ಳಿ ಗೇಟ್‌ಗಳಲ್ಲಿಈಗಾಗಲೇ ಕಾಮಗಾರಿ ಪೂರ್ಣಗೊಂಡುಸಾರ್ವಜನಿಕ ಸೇವೆಗೆ ಮುಕ್ತವಾಗಿದ್ದು,ಉಳಿದ ಕಾಮಗಾರಿಗಳನ್ನುಶೀಘ್ರದಲ್ಲೇ ಪೂರ್ಣಗೊಳಿಸಿಕಾರ್ಯಾರಂಭಗೊಳಿಸಲು ಸಚಿವರುಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಮುಖ್ಯಆಡಳಿತಾಧಿಕಾರಿ ಅಜಯ್ ಶರ್ಮಾಇಲಾಖೆಯ ಹಿರಿಯ ಅಧಿಕಾರಿಗಳುಪಾಲ್ಗೊಂಡಿದ್ದರು.

ನೂತನಮಾರ್ಗಗಳಲ್ಲಿ ಕಾಮಗಾರಿ ಚುರುಕು

ತುಮಕೂರುಚಿತ್ರದುರ್ಗ ದಾವಣಗೆರೆ (191ಕಿ.ಮೀ)ಹೊಸ ರೈಲು ಮಾರ್ಗಯೋಜನೆ ರೂ. 1,801ಕೋಟಿ ಅಂದಾಜುವೆಚ್ಚದಲ್ಲಿ ಕರ್ನಾಟಕ ಸರ್ಕಾರದೊಂದಿಗೆ50:50 ಸಹಭಾಗಿತ್ವದಲ್ಲಿಜಾರಿಯಲ್ಲಿದ್ದು,ಭೂಸ್ವಾಧೀನದಲ್ಲಿಶೇ. 92 ಕ್ಕೂಹೆಚ್ಚು ಪ್ರಗತಿ ಸಾಧಿಸಲಾಗಿದ್ದು,2028ರ ೆಬ್ರವರಿಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಗುರಿ ಹೊಂದಲಾಗಿದೆ.ತುಮಕೂರು ರಾಯದುರ್ಗ(206 ಕಿ.ಮೀ)ಹೊಸ ರೈಲು ಮಾರ್ಗಯೋಜನೆ ರೂ. 2,496ಕೋಟಿ ವೆಚ್ಚದಲ್ಲಿಜಾರಿಯಲ್ಲಿದ್ದು,ಇದರಲ್ಲಿ 83ಕಿ.ಮೀಮಾರ್ಗ ಈಗಾಗಲೇ ಕಾರ್ಯಾರಂಭಗೊಂಡಿದೆ.ಭೂಸ್ವಾಧೀನ ಶೇ.97 ಪೂರ್ಣಗೊಂಡಿದೆಎಂದು ಇದೇ ವೇಳೆ ಸಭೆಯ ಗಮನಕ್ಕೆತರಲಾಯಿತು.

ಬೆಂಗಳೂರು ಮತ್ತು ತುಮಕೂರು ಪ್ರದೇಶಗಳಲ್ಲಿ ಸುಧಾರಿತ ರೈಲು ಸಂಪರ್ಕವು ಕೈಗಾರಿಕಾ ಬೆಳವಣಿಗೆ, ವಾಣಿಜ್ಯ ಚಟುವಟಿಕೆಗಳು ಹಾಗೂ ಒಟ್ಟಾರೆ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದ್ದು, ಎಲ್ಲಾ ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

— ವಿ.ಸೋಮಣ್ಣ, ರೈಲ್ವೇ ಖಾತೆ ರಾಜ್ಯ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net