ಸಚಿವ ಮುನಿಯಪ್ಪ ಸಿಎಂ ಆಗಲಿ

Minister Muniyappa should become CM
Minister Muniyappa should become CM
Published on
ಮಧುಗಿರಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್​.ಮುನಿಯಪ್ಪ ಅವರು ಮಧುಗಿರಿಯ ಜಡೇಗೊಂಡನಹಳ್ಳಿಗೆ ಶುಕ್ರವಾರ ಆಗಮಿಸಿದ್ದ ಸಂದರ್ಭದಲಿ ಸಚಿವರನ್ನು ಸ್ವಾಗತಿಸಿದ ಆದಿಜಾಂಭವ ಸಮುದಾಯದ ಮುಖಂಡರು ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್​.ಮುನಿಯಪ್ಪಗೆ ಎಂದು ಜೈಕಾರ ಕೂಗುತ್ತಾ ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಗತಿಪರ ಚಿಂತಕ ಡಾ.ಕಾಳೇನಹಳ್ಳಿ ನರಸಿಂಹಯ್ಯ ಮಾತನಾಡಿ, ನಮ್ಮ ಜನಾಂಗದ ಹಿರಿಯ ರಾಜಕಾರಣಿ, ಕೇಂದ್ರ ಸರ್ಕಾರದಲ್ಲಿ ಗುರುತಿಸಿಕೊಂಡು ಹೈಕಮಾಂಡ್​ ಜತೆಗೆ ಉತ್ತಮ ಒಡನಾಟ ಹೊಂದಿರುವ ಕೆ.ಎಚ್​.ಮುನಿಯಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಎಲ್ಲ ಅರ್ಹತೆಗಳಿವೆ. ಕಾಂಗ್ರೆಸ್​ ಹೈಕಮಾಂಡ್​ ಇವರ ಸೇವೆ ಗುರುತಿಸಿ ಸಿಎಂ ಮಾಡಲಿ ಎಂದು ಒತ್ತಾಯಿಸಿದರು.
ಮಧುಗಿರಿಯ ಶಕ್ತಿದೇವತೆ ಶ್ರೀ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರವಾಸಿ ಮಂದಿರಕ್ಕೆ ತೆರಳಿದ ಕೆ.ಎಚ್​.ಮುನಿಯಪ್ಪ ಸಮುದಾಯದ ಮುಖಂಡರ ಜತೆ ಕೆಲ ಕಾಲ ಚರ್ಚಿಸಿ, ಈಗಾಗಲೇ ರಾಜ್ಯಾದ್ಯಂತ ಮಾದಾರ ಮಹಾಸಭಾ ಸಂಘಟನೆ ತುಂಬಾ ಚುರುಕಾಗಿ ಸಂಘಟನೆಯಾಗುತ್ತಿದೆ. ಪ್ರತಿಯೊಬ್ಬರೂ ಸಂಘದ ಸದಸ್ಯತ್ವವನ್ನು ನೋಂದಾಯಿಸಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮುಖಂಡ ಎಚ್​.ಎಂ.ಟಿ.ನರಸೀಯಪ್ಪ, ದಸಾಪ ಅಧ್ಯಕ್ಷ ಮಹರಾಜು, ವಕೀಲ ನರಸಿಂಹಮೂರ್ತಿ, ಬಸವನಹಳ್ಳಿ ನಾಗರಾಜು, ಸಣ್ಣರಾಮಯ್ಯ, ಎಸ್​.ಕೆ.ರಂಗನಾಥ್​, ಎಸ್​.ಸಂಜಿವಯ್ಯ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net