ಬಬಲೇಶ್ವರ ಹಾಗೂ ತಿಕೋಟಾ ತಾಲೂಕು ವ್ಯಾಪ್ತಿಯ ನಾಗರಾಳ, ಕುಮಠೆ, ಬಾಬಾನಗರ, ನಿಡೋಣಿ, ಜಾಲಗೇರಿ, ಡೋಕಳೆವಾಡಿ ಹಾಗೂ ಅರ್ಜುಣಗಿ ಗ್ರಾಮದಲ್ಲಿ 150 ರೈತರಿಗೆ ಉಚಿತ ತರಬೇತಿ ನೀಡುವ ಮೂಲಕ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರನ್ನು ಸಾಂಪ್ರದಾಯಿಕ ಹೈನುಗಾರಿಕೆಯಿಂದ ವೈಜ್ಞಾನಿಕ ವಿಧಾನದ ಮೂಲಕ ಅತೀ ಕಡಿಮೆ ಮೇವು ನೀಡಿ, ಆಕಳುಗಳನ್ನು ಒಂದೇ ಕಡೆ ಕಟ್ಟಿ ಹಾಕದೇ ಸ್ವತಂತ್ರವಾಗಿ ಬಿಡುವ ಮೂಲಕ ಡೈರಿ ಫಾರ್ಮಿಂಗ್‌ನಲ್ಲಿ ರೈತರನ್ನು ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ.