ಗಣಿಗಾರಿಕೆಯಿಂದ ಗ್ರಾಮಸ್ಥರ ಬದುಕು ಹೈರಾಣ PROTEST

ಕ್ರಷರ್​ ಲಾರಿಗಳ ಸಂಚಾರದಿಂದಾಗುತ್ತಿರುವPROTEST  ತೊಂದರೆ ವಿರೋಧಿಸಿ ಕುಣಿಗಲ್​ ತಾಲೂಕಿನ ಬಿಸೇಗೌಡನದೊಡ್ಡಿ ಗ್ರಾಮದ ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟಿಸಿದರು. ಗ್ರಾಮಸ್ಥರಾದ  ಪ್ರಕಾಶ್​, ಸೀನಪ್ಪ ,ವೆಂಕಟೇಶ್​, ಗಿರೀಶ್​, ರಾಜಣ್ಣ, ನಾಗೇಶ್​, ರಮೇಶ್​, ನಂಜುಂಡಸ್ವಾಮಿ, ಶಂಕರ್​, ಪಟೇಲಪ್ಪ ಇದ್ದರು.
ಕ್ರಷರ್​ ಲಾರಿಗಳ ಸಂಚಾರದಿಂದಾಗುತ್ತಿರುವPROTEST ತೊಂದರೆ ವಿರೋಧಿಸಿ ಕುಣಿಗಲ್​ ತಾಲೂಕಿನ ಬಿಸೇಗೌಡನದೊಡ್ಡಿ ಗ್ರಾಮದ ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟಿಸಿದರು. ಗ್ರಾಮಸ್ಥರಾದ ಪ್ರಕಾಶ್​, ಸೀನಪ್ಪ ,ವೆಂಕಟೇಶ್​, ಗಿರೀಶ್​, ರಾಜಣ್ಣ, ನಾಗೇಶ್​, ರಮೇಶ್​, ನಂಜುಂಡಸ್ವಾಮಿ, ಶಂಕರ್​, ಪಟೇಲಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರಷರ್​ ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಬಿಸೇಗೌಡ ದೊಡ್ಡಿ ಜನರು
  • ಸ್ಥಳಿಯರ ಮನವಿಗೆ ಕಿವಿಗೊಡದ ಅಧಿಕಾರಿಗಳು
ಹುಲಿಯೂರುದುರ್ಗ: ಗಣಿಗಾರಿಕೆಯಿಂದಾಗಿ ಜನ ಜಾನುವಾರುಗಳ ಬದುಕು ದುಸ್ತರವಾಗಿದೆ PROTEST ಎಂದು ಆರೋಪಿಸಿ ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಬಿಸೇಗೌಡನ ದೊಡ್ಡಿ ಗ್ರಾಮದಲ್ಲಿ ಗುರುವಾರ ಕ್ರಷರ್​ ಲಾರಿಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಕಾರಣದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿಮಾರ್ಣವಾಗಿದೆ. ಗಣಿಗಾರಿಕೆಯಲ್ಲಿ ಉತ್ಪತ್ತಿಯಾಗುವ ವಿಷಪೂರಿತ ಧೂಳಿನ ಕಾರಣದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಜಾನುವಾರುಗಳು ಧೂಳು ಮಿಶ್ರಿತ ಮೇವು ತಿಂದು ಸಾವಪ್ಪುತ್ತಿವೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಗಣಿಗಾರಿಕೆಯ ಕಾರಣದಿಂದ ಬದುಕು ದುಸ್ತರವಾಗಿದೆ ಎಂದು ಕಿಡಿಕಾರಿದರು.
ದಿನದ ಇಪ್ಪತ್ತನಾಲ್ಕು ಗಂಟೆಗಳೂಕ್ರಷರ್​ ಕಾರ್ಯನಿರ್ವಹಿಸುತ್ತಿರುವ ಕಾರಣ ಸ್ಫೋಟಕ್ಕೆ ಕಾಡು ಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ. ಈ ಬಗ್ಗೆ ತಾಲೂಕು ಆಡಳಿತ, ಜಿಲ್ಲಾಡಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗಣಿಗಾರಿಕೆಯಿಂದಾಗಿ ಹಲವರು ಕುಟುಂಬ ಸಹಿತ ಗ್ರಾಮಗಳನ್ನು ತೊರೆದಿದ್ದಾರೆ. ಕ್ರಷರ್​ನಿಂದ ಎಂಸ್ಯಾಂಡ್​, ಜಲ್ಲಿ ಸಾಗಿಸುವಾಗ ಟಿಪ್ಪರ್​ ಲಾರಿಗಳು ಮೇಲೆ ಟಾರ್ಪಲ್​ ಹೊದಿಕೆ ಹಾಕುವುದಿಲ್ಲ. ಇದರಿಂದ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳು, ಎಂಸ್ಯಾಂಡ್​ ಬಿದ್ದು ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರು ಬಿದ್ದು ಹಲವರು ಕಾಲು ಕೈ ಮುರಿದುಕೊಂಡಿದ್ದಾರೆ. ಲಾರಿಗಳಲ್ಲಿ ಅತಿಯಾದ ಭಾರ ತುಂಬುವ ಕಾರಣದಿಂದ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ನಿಮಾರ್ಣವಾಗಿವೆ ಎಂದು ದೂರಿದರು.
ಕಲ್ಲುಬಂಡೆ ಸ್ಫೋಟದ ಸಂದರ್ಭದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮವಾಗಲಿ ಅಥವಾ ಸೈರನ್​ ಆಗಲಿ ಮಾಡುವುದಿಲ್ಲ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸಲಾಗುತ್ತಿದೆ. ರಸ್ತೆಯಲ್ಲಿ ಲಾರಿಗಳು ಸಂಚರಿಸುವಾಗ ಮೇಲೇಳುವ ಧೂಳಿಗೆ ನೀರು ಸಹ ಹಾಕುವುದಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net