ವಲಸಿಗರ ಕೇಂದ್ರ ಭರ್ತಿ, ಬಾಂಗ್ಲಿಗರಿಗೆ ಎನ್‌ಜಿಓನಲ್ಲಿ ಆಶ್ರಯ

Bangladeshis given shelter at NGO
Bangladeshis given shelter at NGO
Published on

ಪ್ರಮುಖ ಮುಖ್ಯಾಂಶಗಳು

  • ಸೈಬರ್ ಕೇಂದ್ರಗಳ ಪತ್ತೆ ಕಾರ್ಯ ಚುರುಕು
  • 2 ಸಾವಿರಕ್ಕೂ ಹೆಚ್ಚು ಮೊಬೈಲ್ ವಶಕ್ಕೆ
  • ಅಕ್ರಮದಾರರ ಗಡಿಪಾರಿಗೆ ಸಿದ್ಧತೆ

ಬೆಂಗಳೂರು:

ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆಯಲಿ ಬಂಧಿತ 105 ಮಂದಿ ಶಂಕಿತರನ್ನು ವಿದೇಶಿ ವಲಸಿಗರ ಕೇಂದ್ರಗಳು ಭರ್ತಿಯಾಗಿರುವ ಪರಿಣಾಮ 20ಕ್ಕೂ ಹೆಚ್ಚು ಎನ್‌ಜಿಓಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ನಗರದ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿ ನಡೆಸಿದ ವಿಶೇಷ ಕಾಯಾಚರಣೆಯಲ್ಲಿ 2,944 ಶಂಕಿತರನ್ನು ಬಂಧಿಸಲಾಗಿತ್ತು. ಎಲ್ಲರ ದಾಖಲೆ ಪರಿಶೀಲನೆ ಹಾಗೂ ಭಾರತದ ಗಡಿ ಒಳಗೆ ಪ್ರವೇಶ ಮಾಡಿರುವ ಬಗ್ಗೆ ತನಿಖೆ ನಡೆಸಿರುವ ಪೊಲೀಸರು, ಬಂಧಿತ 105 ಮಂದಿಯನ್ನು ಗಡಿಪಾರಿಗೆ ಸಿದ್ಧತೆ ನಡೆಸಿದ್ದಾರೆ. ಉಳಿದವರ ಪೌರತ್ವ ಗುರುತು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.

ಗಡಿಪಾರು ಪ್ರಕ್ರಿಯೆಗೆ 2 ತಿಂಗಳು

ಅಕ್ರಮ ಬಾಂಗ್ಲಾ ವಾಸಿಗಳನ್ನು ಅವರ ದೇಶಕ್ಕೆ ವಾಪಸ್ ಗಡಿಪಾರುಗೊಳಿಸಲು ಕೆಲವು ತಾಂತ್ರಿಕ ದಾಖಲೆ ಸಂಗ್ರಹ ಹಾಗೂ ಬಾಂಗ್ಲಾ ದೇಶದ ಎಂಬಸ್ಸಿ, ಎಂಎಚ್‌ಎ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.
ವಶಕ್ಕೆ ಪಡೆದಿರುವ ಬಾಂಗ್ಲಿಗರ ಮೊಬೈಲ್‌ಗಳಲ್ಲಿ ಅವರ ದೇಶದ ‘ಬಿನ್’ ನಂಬರ್‌ಗಳು ಪತ್ತೆಯಾಗಿವೆ. ಅಂತರವನ್ನು ನೇರವಾಗಿ ಬಾಂಗ್ಲಾ ಗಡಿಗೆ ಕರೆದುಕೊಂಡು ಹೋಗಿ ಆ ದೇಶದ ನಾಗರಿಕರು ಎಂಬ ದಾಖಲೆಗಳನ್ನು ಹಸ್ತಾಂತರಿಸಿ ಅವರನ್ನು ಕಳುಹಿಸುವ ಪ್ರಕ್ರಿಯೆಗೆ 2 ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೈಬರ್ ಕೇಂದ್ರಗಳ ಪತ್ತೆ
ಅಕ್ರಮ ನಿವಾಸಿಗಳಿಗೆ ನಕಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೀಡುತ್ತಿದ್ದ ಸೈಬರ್ ಕೇಂದ್ರ ಹಾಗೂ ಆನ್‌ಲೈನ್ ಸೆಂಟರ್‌ಗಳ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಹಣ ನೀಡಿದರೆ ಸಾಕು ಬೇರೆಯವರ ದಾಖಲೆಗಳನ್ನು ಇಟ್ಟುಕೊಂಡು ನಕಲಿ ಆಧಾರ್, ಗುರುತಿನ ಚೀಟಿ ನೀಡುತ್ತಿದ್ದ ಜಾಲ ನಗರದಲ್ಲಿ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಮುಂದಾಗಿದ್ದಾರೆ.
ಚಿಕ್ಕ ಮಕ್ಕಳಿಗೂ ಆಧಾರ್ ಕಾರ್ಡ್ ಪೂರೈಕೆ ಮಾಡುತ್ತಿದ್ದವ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರು ಅಷ್ಟೇ ಅಲ್ಲದೆ ವಿವಿಧ ಜಿಲ್ಲೆಗಳಲ್ಲಿ ಇವರೊಂದಿಗೆ ಆಗಮಿಸಿರುವವರ ಮಾಹಿತಿ ಕಲೆ ಹಾಕಲಾಗುತ್ತಿದೆ.

2 ಸಾವಿರ ಮೊಬೈಲ್ ವಶಕ್ಕೆ

ವಶಕ್ಕೆ ಪಡೆದಿರುವ 2,944 ಬಾಂಗ್ಲಿಗರ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ. ಬಾಂಗ್ಲಾ ದೇಶದವರೊಂದಿಗೆ ಸಂಪರ್ಕ ಹೊಂದಿದವರನ್ನು ಅಕ್ರಮ ಬಾಂಗ್ಲಿಗರು ಎಂದು ಪರಿಗಣಿಸುತ್ತಿರುವ ಪೊಲೀಸರು, ಬೆಂಗಳೂರಿನ ವಿವಿಧ ಕಡೆ ವಾಸವಾಗಿರುವವರ ಪತ್ತೆ ಮೊಬೈಲ್ ಲೋಕೆಷನ್ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ. ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ ಪಡೆಯಲು ನೀಡಿರುವ ದಾಖಲೆ ಹಾಗೂ ಭಾರತೀಯರು ಎಂಬುವುದಕ್ಕೆ ಮೂಲ ದಾಖಲೆಗಳ ತಪಾಸಣೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net