ಹೊಸಕೋಟೆಗೆ ಮೆಟ್ರೋ ಸಂಪರ್ಕ / HOSAKOTE

ಹೊಸಕೋಟೆಯ ದೇವಲಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ರತ್ನಾ ಗೋವಿಂದರಾಜ್​, ಸದಸ್ಯ ಮಾರೇಗೌಡ, ಮಂಜುನಾಥ್​, ಮುಖಂಡರಾದ ಭೋದನಹೊಸಳ್ಳಿ ಪ್ರಕಾಶ್​, ಗುತ್ತಿಗೆದಾರ ಬೇಟೆಗೌಡ ಇದ್ದರು.
ಹೊಸಕೋಟೆಯ ದೇವಲಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ರತ್ನಾ ಗೋವಿಂದರಾಜ್​, ಸದಸ್ಯ ಮಾರೇಗೌಡ, ಮಂಜುನಾಥ್​, ಮುಖಂಡರಾದ ಭೋದನಹೊಸಳ್ಳಿ ಪ್ರಕಾಶ್​, ಗುತ್ತಿಗೆದಾರ ಬೇಟೆಗೌಡ ಇದ್ದರು.
Published on
ಹೊಸಕೋಟೆ : ಕೆ.ಆರ್​.ಪುರದ ಐಟಿಐಯಿಂದ ಹೊಸಕೋಟೆ ನಗರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸದನದಲ್ಲಿ ಮಾತನಾಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್​ ಈ ಬಗ್ಗೆ ಸಂಪೂರ್ಣ ಭರವಸೆ ನೀಡಿದ್ದಾರೆ. ಸದ್ಯದಲ್ಲೇ ಡಿಪಿಆರ್​ ಸಿದ್ಧಪಡಿಸಲಾಗುವುದು ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.
ದೇವನಗುಂದಿ&ದೇವಲಾಪುರ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ಸ್ಥಳಿಯರು ಇಟ್ಟಿದ್ದ ಬೇಡಿಕೆ ಸಾಕಾರಗೊಂಡಿದೆ. ಗುಣಮಟ್ಟ ಹಾಗೂ ಕಾಲಮಿತಿಯಲ್ಲಿ ರಸ್ತೆ ನಿಮಾರ್ಣಗೊಳ್ಳಲಿದ್ದು, ಎರಡು ಗ್ರಾಮಗಳ ಸಂಪರ್ಕ ಉತ್ತಮವಾಗಿರಲಿದೆ ಎಂದರು.
ಕಾಂಗ್ರೆಸ್​ ತೆಕ್ಕೆಗೆ ಟೌನ್​ ಬ್ಯಾಂಕ್​ ಆಡಳಿತ: 10 ವರ್ಷಗಳ ಹಿಂದೆ ಕೈ ತಪ್ಪಿದ ದಿ ಟೌನ್​ ಕೋ ಆಪರೇಟೀವ್​ ಬ್ಯಾಂಕ್​ ಆಡಳಿತ ಮತ್ತೆ ಪಕ್ಷದ ಬೆಂಬಲಿತರಿಗೆ ಧಕ್ಕಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರಸವೆ ಈಡೇರಿಸಲಿದ್ದೇವೆ ಎಂದು ಶಾಸಕ ಶರತ ಬಚ್ಚೇಗೌಡ ಹೇಳಿದರು.
ಹೈಮಾಂಡ್​ ನಿರ್ಧಾರ : ರಾಜ್ಯದಲ್ಲಿ ಅಧಿಕಾರ ಬದಲಾಗುವುದೋ ಇಲ್ಲವೋ ಎಲ್ಲವೂ ಹೈ ಕಮಾಂಡ್​ ನಿರ್ಧಾರ. ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್​ ಗಾಂಧಿ ಹಾಗೂ ಇತರರು ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಹಾದಿಬೀದಿಗಳಲ್ಲಿ ಮಾತನಾಡುವುದು ಸಮಂಜಸವಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಶಾಸಕ ಶರತ್​ ಬಚ್ಚೇಗೌಡ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net