ಸತ್ಕಾರ್ಯಗಳಿಂದ ಲಭಿಸಲಿದೆ ಪುಣ್ಯ

  ಅರಕಲಗೂಡು ಕೋಟೆ ಗಣಪತಿ ಕೊತ್ತಲಿನಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರಮೇಶ್ ವಾಟಾಳ್, ಮಂಜುನಾಥ್, ವೆಂಕಟೇಶ್, ಶಶಿಕುಮಾರ್, ಪ್ರವೀಣ್ ಇತರರಿದ್ದರು.
ಅರಕಲಗೂಡು ಕೋಟೆ ಗಣಪತಿ ಕೊತ್ತಲಿನಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರಮೇಶ್ ವಾಟಾಳ್, ಮಂಜುನಾಥ್, ವೆಂಕಟೇಶ್, ಶಶಿಕುಮಾರ್, ಪ್ರವೀಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಳೇಗಾರ ಕೃಷ್ಣಪ್ಪನಾಯಕನ ಕೋಟೆ ಆವರಣದಲ್ಲಿರುವ ಕೋಟೆ ಗಣಪತಿ ಕೊತ್ತಲಿನ
  • 55ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವ
ಅರಕಲಗೂಡು: ಪಟ್ಟಣದ ಐತಿಹಾಸಿಕ ಪಾಳೇಗಾರ ಕೃಷ್ಣಪ್ಪನಾಯಕನ ಕೋಟೆ ಆವರಣದಲ್ಲಿರುವ ಕೋಟೆ ಗಣಪತಿ ಕೊತ್ತಲಿನ 55ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಶಾಸಕ ಎ. ಮಂಜು ಪಾಲ್ಗೊಂಡು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಘ್ನನಿವಾರಕ ಗಣಪತಿಯ ದರ್ಶನ ಪಡೆದರು.
ಕೋಟೆ ಗಣಪತಿ ಕೊತ್ತಲಿನ ಗಣೇಶೋತ್ಸವ ಪಟ್ಟಣದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಪ್ರತಿವರ್ಷವೂ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ದೈವಾನುಗ್ರಹ ನಮ್ಮೆಲ್ಲರ ಮೇಲಿರದೆ, ಇಂತಹ ಸತ್ಕಾರ್ಯಗಳಿಂದ ಪುಣ್ಯ ಸಿದ್ಧಿಸಲಿದೆ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುಶೆಟ್ಟಿಗೌಡ, ಮಾಜಿ ಉಪಾಧ್ಯಕ್ಷ ಎಚ್.ಸಿ. ವೆಂಕಟೇಶ್, ಶ್ರೀ ದೊಡ್ಡಮ್ಮ ತಾಯಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆಳ್ಳಟ್ಟಿ ಶಶಿಕುಮಾರ್, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಎ.ಎಸ್. ಪ್ರವೀಣ್ ಮಂಜು, ಎಸ್.ಎಸ್.ಸಂತೋಷ್ ಗೌಡ, ಪ್ರವೀಣ್, ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ, ದಿನೇಶ್, ಎ.ಆರ್. ರವಿವರ್ಧನ್, ಸುರೇಶ್ ದಾದಾ, ಡ್ರೋನ್ ಧನಂಜಯ, ನವನಟರಾಜ್ ಇತರರಿದ್ದರು. ವಿಗ್ರಹ ಶಿಲ್ಪಿ ವಿಶ್ವೇಶ್ವರಯ್ಯ ಅವರ ಕೈಚಳಕದಲ್ಲಿ ರೂಪುಗೊಂಡ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net