ಕುರ್ರಪಲ್ಲಿ ಶ್ರೀ ಯೋಗಿ ನಾರೇಯಣ ಸ್ವಾಮಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಭಜನೆಗೆ ಚಾಲನೆ ನೀಡಿ ಮಾತನಾಡಿ, ಭಜನೆಗೆ ಅಪಾರವಾದ ಶಕ್ತಿಯಿದೆ. ದೇವರನ್ನು ಒಳಿಸಿಕೊಳ್ಳುವ ಸುಲಭ ಮಾರ್ಗ. ಹಿರಿಯರು ಹಳ್ಳಿಗಳಲ್ಲಿ ವಾರಕ್ಕೊಮ್ಮೆ ಒಂದೆಡೆ ಸೇರಿ ಭಜನೆ, ಕೋಲಾಟ, ಜನಪದಗೀತೆ, ಪಂಡರಿ ಭಜನೆ, ಚಕ್ಕಲ ಕೋಲಾಟ ಮುಂತಾದವುಗಳನ್ನು ಆಡುತ್ತಿದ್ದರು. ಇತ್ತೀಚೆಗೆ ಮೊಬೈಲ್, ಟಿ.ವಿ ಮುಂತಾದ ಮಾಧ್ಯಮಗಳಿಗೆ ಮಾರು ಹೋಗಿ ಜಾನಪದ ಕಲೆಗಳು ಮಾಯವಾಗುತ್ತಿವೆ. ಗ್ರಾಮೀಣ ಯುವಕರು ಭಜನೆ, ಸಾಂಸತಿಕ ಚಟುವಟಿಕೆಗಳನ್ನು ಕಲಿತು ಪ್ರದರ್ಶಿಸಿದಾಗ ನಾಡು ನುಡಿ, ಸಂಸತಿಯನ್ನು ಬೆಳೆಸಲು ಸಾಧ್ಯ ಎಂದರು.