ಶಾಲಾ ಮಕ್ಕಳ ಒತ್ತಡ ತಗ್ಗಿಸಲು ಮಾನಸಿಕ ಆರೋಗ್ಯ ಸಲಹೆಗಾರರ ನೇಮಕ
ಮಾನಸಿಕ ಆರೋಗ್ಯ ಸಲಹೆಗಾರರ ನೇಮಕ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ‘ಮಾನಸಿಕ ಆರೋಗ್ಯ’ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ
ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸೆಲಿಂಗ್ ಮನೋವಿಜ್ಞಾನ ವಿಷಯದಲ್ಲಿ ಎಂ.ಎ/ಎಂ.ಎಸ್.ಸಿ. ಪದವಿ ಹೊಂದಿರುವ ಅರ್ಹರು
ಪ್ರತಿ ವೈದ್ಯಕೀಯ ಸಲಹಾಗಾರರಿಗೆ 40 ಸಾವಿರ ರೂ. ಗೌರವ ಧನ ಮತ್ತು 10 ಸಾವಿರ ರೂ. ಪ್ರಯಾಣ ಭತ್ಯೆ ಸೇರಿ ಒಟ್ಟು 50 ಸಾವಿರ ವೇತನ
ಬೆಂಗಳೂರು:
ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಪ್ರತಿ ತಾಲೂಕಿಗೊಬ್ಬರಂತೆ 204 ‘ಮಾನಸಿಕ ಆರೋಗ್ಯ ಸಲಹೆಗಾರ’ರನ್ನಾಗಿ ನೇಮಿಸಲಾಗುತ್ತಿದೆ.
2026-27ನೇ ಸಾಲಿನ ಬಜೆಟ್‌ನಲ್ಲಿ ೋಷಿಸಿದ್ದಂತೆ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ‘ಮಾನಸಿಕ ಆರೋಗ್ಯ’ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸೆಲಿಂಗ್ ಮನೋವಿಜ್ಞಾನ ವಿಷಯದಲ್ಲಿ ಎಂ.ಎ/ಎಂ.ಎಸ್.ಸಿ. ಪದವಿ ಹೊಂದಿರುವ ಅರ್ಹರು, ಶಾಲೆ ಅಥವಾ ಸಮುದಾಯ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷ ಸೇವಾ ಅನುಭವ ಹೊಂದಿರಬೇಕು. ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಜಿಪಂ ಸಿಇಒ ನೇತೃತ್ವದಲ್ಲಿ ಸಮಿತಿ:
ಅಭ್ಯರ್ಥಿಗಳ ನೇಮಕಾತಿಗೆ ಜಿಪಂ ಸಿಇಒ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಸದಸ್ಯರಾಗಿ ಮಾಡಲಾಗಿದೆ.
50 ಸಾವಿರ ಗೌರವ ಧನ:
ಪ್ರತಿ ವೈದ್ಯಕೀಯ ಸಲಹಾಗಾರರಿಗೆ 40 ಸಾವಿರ ರೂ. ಗೌರವ ಧನ ಮತ್ತು 10 ಸಾವಿರ ರೂ. ಪ್ರಯಾಣ ಭತ್ಯೆ ಸೇರಿ ಒಟ್ಟು 50 ಸಾವಿರ ವೇತನ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿರುವ 204 ಬ್ಲಾಕ್‌ಗಳಿಗೆ ಒಟ್ಟು 612 ಲಕ್ಷ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಗಳಿಗೆ ಭೇಟಿ ನೀಡಿ ಕೌನ್ಸೆಲಿಂಗ್
ಆ.20ರೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆರೋಗ್ಯ ಸಲಹೆಗಾರರು ಪ್ರತಿ ತಿಂಗಳು ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಒತ್ತಡ, ಸಹಪಾಠಿಗಳ ಒತ್ತಡ ಹಾಗೂ ಭಾವನಾತ್ಮಕ ನಿಯಂತ್ರಣದಂತಹ ವಿಷಯಗಳನ್ನು ಕುರಿತು ಶಿಕ್ಷಕರು ಹಾಗೂ ಪಾಲಕರೊಂದಿಗೆ ಸಮಾಲೋಚಿಸಬೇಕು. ಅಪಾಯದಲ್ಲಿರುವ ವಿದ್ಯಾರ್ಥಿಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆ ಅಥವಾ ತಜ್ಞರಿಗೆ ತಿಳಿಸಬೇಕು. ಜಿಲ್ಲಾ ಮಟ್ಟದಲ್ಲಿ ಮಾಸಿಕ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಪದವಿ ಕಾಲೇಜು ಪ್ರಾಂಶುಪಾಲರಿಗೆ ನಿಮ್ಹಾನ್ಸ್ ತರಬೇತಿ
ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಪದವಿ ಕಾಲೇಜುಗಳಲ್ಲಿಯೂ ಜಾರಿಗೊಳಿಸಲಾಗುತ್ತಿದೆ. ಈ ಸಂಬಂಧ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯು ಆ. 11ರಂದು ಪದವಿ ಕಾಲೇಜು ಪ್ರಾಂಶುಪಾಲರು ಮತ್ತು ಸಿಬ್ಬಂದಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ತಜ್ಞರು ಮಾಹಿತಿ ನೀಡಲಿದ್ದಾರೆ.