ತೆರಿಗೆ ಹೆಚ್ಚಳಕ್ಕೆ ಸದಸ್ಯರ ಆಕ್ರೋಶ

ಕಮತಗಿ ಪಟ್ಟಣದ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಬಸವರಾಜ ಕುಂಬಳಾವತಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ ಹಾಗೂ ಸರ್ವ ಸದಸ್ಯರು, ಪಪಂ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ ಮತ್ತು ಸಿಬ್ಬಂದಿ ಇದ್ದರು.
ಕಮತಗಿ ಪಟ್ಟಣದ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಬಸವರಾಜ ಕುಂಬಳಾವತಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ ಹಾಗೂ ಸರ್ವ ಸದಸ್ಯರು, ಪಪಂ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ ಮತ್ತು ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂಲ ಸೌಲಭ್ಯ ಒದಗಿಸಲು ಹೆಚ್ಚಳ ಸಮರ್ಥನೆ
  • ಸಾಮಾನ್ಯ ಸಭೆ
ಕಮತಗಿ: ಖಾತೆ ಬದಲಾವಣೆಯ ತೆರಿಗೆಯನ್ನು ಶೇ.1ರಿಂದ ಶೇ.2ರಷ್ಟು ಪಡೆದರೆ ನೇಕಾರರಿಗೆ ಮತ್ತು ಬಡಜನತೆಗೆ ಹೊರೆಯಾಗುತ್ತದೆ ಎಂದು ಸದಸ್ಯರಾದ ರಮೇಶ ಜಮಖಂಡಿ ಮತ್ತು ಸಂಗಪ್ಪ ಗಾಣಗೇರ ಜಂಟಿಯಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ತೆರಿಗೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಪಪಂ ಅಧ್ಯಕ್ಷ ಬಸವರಾಜ ಕುಂಬಳಾವತಿ ಮತ್ತು ಉಪಾಧ್ಯಕ್ಷ ನೇತ್ರಾವತಿ ನಿಂಬಲಗುಂದಿ ಮಾತನಾಡಿದರು.
ಪಟ್ಟಣದಲ್ಲಿ ಶ್ರೀಮಂತರು ಜಾಸ್ತಿಯಿದ್ದಾರೆ. ತೆರಿಗೆ ಹೆಚ್ಚಿಸಿದರೆ ಹೊರೆಯಾಗುವುದಿಲ್ಲ, ತೆರಿಗೆ ಹೆಚ್ಚಿಸದಿದ್ದರೆ ಸಾರ್ವಜನಿಕರಿಗೆ ಹೇಗೆ ಮೂಲ ಸೌಲಭ್ಯ ಒದಗಿಸಬೇಕು?. ಸೌಲಭ್ಯ ಹೆಚ್ಚಳಕ್ಕಾಗಿ ತೆರಿಗೆಯನ್ನು ಹೆಚ್ಚಳ ಮಾಡೋಣ ಎಂದಾಗ ಕೆಲವು ಸದಸ್ಯರು ಒಪ್ಪಿಗೆ ಸೂಚಿಸಿದರೆ, ಇನ್ನೂ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಪಪಂನಿಂದ 6 ಲಕ್ಷ 63 ಸಾವಿರ ರೂ. ವೆಚ್ಚದಲ್ಲಿ ಖರೀದಿಸಲಾದ ಬೀದಿ ದೀಪಗಳು ಎಲ್ಲಿವೆ?, ಪ.ಪಂ ಮುಖ್ಯಾಧಿಕಾರಿ ಕಾರಿನ ಬಾಡಿಗೆ 78 ಸಾವಿರ ರೂ. ಹೇಗೆ ಆಗುತ್ತದೆ?, ಗಣರಾಜ್ಯೋತ್ಸವಕ್ಕೆ 40 ಸಾವಿರ ರೂ. ಖರ್ಚು ತೋರಿಸಿದ್ದೀರಿ? ಇಷ್ಟು ಖರ್ಚು ಹೇಗೆ ಆಗುತ್ತದೆ. ಉತಾರಕ್ಕೆ 500 ರೂ. ಪಡೆಯುವುದು ಎಷ್ಟು ಸರಿ ಅಂತ ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ಸದಸ್ಯರು ಹಾಗೂ ಪಪಂ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯಾಧಿಕಾರಿ ಸಮರ್ಪಕ ಉತ್ತರ ನೀಡಲಾಗದೇ ತಡಬಡಾಯಿಸಿದರು.
ಪಪಂ ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಸದಸ್ಯರಾದ ಚಂದು ಕುರಿ, ಲಕ್ಷ್ಮಣ ಮಾದರ, ದೇವಿಪ್ರಸಾದ ನಿಂಬಲಗುಂದಿ, ಸಂಗಪ್ಪ ಗಾಣಗೇರ, ರಮೇಶ ಜಮುಖಂಡಿ, ಗುರುಲಿಂಗಪ್ಪ ಪಾಟೀಲ, ಹುಚ್ಚೇಶ ಮದ್ಲಿ, ಹುಚ್ಚವ್ವ ಹಗೇದಾಳ, ಸುಮಿತ್ರಾ ಲಮಾಣಿ, ನಂದಾ ದ್ಯಾಮನ್ನವರ, ರತ್ನಾ ತಳಗೇರಿ, ಮಂಜುಳಾ ಮುರಾಳ, ಬಸವರಾಜ ದಂಡಾವತಿ, ಸಂಗಪ್ಪ ಮೇದಾರ, ಮುಂಜುನಾಥ ವಡವಡಗಿ, ಪಪಂ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ, ರಮೇಶ ಪದಕಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net