ಡಿಜಿಟಲ್ ತಂತ್ರಜ್ಞಾನ ಸುರಕ್ಷಿತ ಬಳಕೆಗೆ ಸಭೆ

Nimhans
Nimhans
Published on

ಪ್ರಮುಖ ಮುಖ್ಯಾಂಶಗಳು

  • * 17ರಂದು ನಿಮ್ಹಾನ್ಸ್‌ನಲ್ಲಿ ಆಯೋಜನೆ
  • * ಶಿಫಾರಸು ರೂಪಿಸಿ ಕೇಂದ್ರಕ್ಕೆ ವರದಿ ಸಲ್ಲಿಕೆ
ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನ ಬಳಕೆಯ ಮಾರ್ಗಸೂಚಿಯಲ್ಲಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ನಿಮ್ಹಾನ್ಸ್‌ನಲ್ಲಿ ಶುಕ್ರವಾರ (ಏ.17) ರಾಷ್ಟ್ರೀಯ ಮಟ್ಟದ ಡಿಜಿಟಲ್ ತಂತ್ರಜ್ಞಾನ ಸುರಕ್ಷಿತ ಬಳಕೆ ಕುರಿತ ಸಮಾಲೋಚನಾ ಸಭೆ ಏರ್ಪಡಿಸಲಾಗಿದೆ.
ಕೃತಕ ಬುದ್ಧಿಮತ್ತೆ ಒಳಗೊಂಡ ಹಾಗೂ ಸಾಮಾನ್ಯ ಆ್ಯಪ್‌ಗಳು, ಮೊಬೈಲ್ ಸೇರಿ ಇನ್ನಿತರ ಡಿಜಿಟಲ್ ಬಳಕೆ ದೇಶದಲ್ಲಿ ಹೆಚ್ಚಾಗಿದೆ. ಈ ಕುರಿತು ಸಭೆಯಲ್ಲಿ ಡಿಜಿಟಲ್ ಸುರಕ್ಷಿತ ಬಳಕೆಯ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಮಾರ್ಗಸೂಚಿ ಹಾಗೂ ಶಿಫಾರಸು ರೂಪಿಸಿ ಕೇಂದ್ರಕ್ಕೆ ಸಲ್ಲಿಸಲು ನಿಮ್ಹಾನ್ಸ್ ನಿರ್ಧರಿಸಿದೆ.
ಭಾರತದ ಡಿಜಿಟಲ್ ಬಳಕೆ ಆದ್ಯತೆಗಳಿಗೆ ಅನುಗುಣವಾಗಿ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಉತ್ತೇಜಿಸಬೇಕಿದೆ. ಒಟ್ಟಾರೆ ಡಿಜಿಟಲ್ ತಂತ್ರಜ್ಞಾನದ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಗಾಗಿ ಜಾರಿಗೆ ತರಬಹುದಾದ ಮಾರ್ಗಸೂಚಿ ಮತ್ತು ಶಿಫಾರಸುಗಳನ್ನು ಸಿದ್ಧಪಡಿಸುವುದು ಈ ಸಭೆಯ ಉದ್ದೇಶ. ಪ್ರಮುಖ ತಜ್ಞರು, ವಿವಿಧ ಸಂಸ್ಥೆಗಳು ಮತ್ತು ಸರ್ಕಾರಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ನಿಮ್ಹಾನ್ಸ್ ತಿಳಿಸಿದೆ.
ದೇಶಾದ್ಯಂತ ಮೊಬೈಲ್ ಅಪ್ಲಿಕೇಶನ್ ಮತ್ತು ತಂತ್ರಜ್ಞಾನ ಆಧಾರಿತ ಪರಿಕರಗಳು ಹೆಚ್ಚಾಗುತ್ತಿದ್ದು, ಅವುಗಳ ಗುಣಮಟ್ಟ, ಗೌಪ್ಯತೆ, ಸುರಕ್ಷತೆ ಮತ್ತು ಜವಾಬ್ದಾರಿಯುತ ಬಳಕೆಯ ಕುರಿತು ಸಭೆಯಲ್ಲಿ ಚರ್ಚಿಸಿ ಮಾರ್ಗಸೂಚಿ ರೂಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಸಭೆಯಲ್ಲಿ ಐಸಿಎಂಆರ್, ಕೇಂದ್ರದ ಆರೋಗ್ಯ ಇಲಾಖೆ, ಎಲೆಕ್ಟ್ರಾನಿಕ್ಸೃ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಯುನಿಸೆಫ್ ಇಂಡಿಯಾ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net