

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸ್ವಭಾವತಃಬಹಿರ್ಮುಖವಾದ ಮನುಷ್ಯನ ಮನಸ್ಸನ್ನುಶಾಸ್ತ್ರವಿಹಿತವಾದ ವಿಭಿನ್ನಉಪಾಯಗಳ ಮೂಲಕ ಅಂತರ್ಮುಖಗೊಳಿಸುವಸಾಧನೆಯೆ ಶಿವಧ್ಯಾನ ಎಂದು ಶ್ರೀಶೈಲಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.
ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀಶೈಲ ಜಗದ್ಗುರುಗಳ ಕಾರ್ಯಕ್ರಮಸೇವಾ ಸಮಿತಿ ಆಶ್ರಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿರುವಇಷ್ಟಲಿಂಗ ಮಹಾಪೂಜೆ ಹಾಗೂಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕಪ್ರವಚನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ನೀರಿಗೆಸ್ವತಃ ಆಕಾರವಿರುವುದಿಲ್ಲ;ಯಾವುದರಲ್ಲಿಅದನ್ನು ಹಾಕುತ್ತೇವೋ ಅದರ ಆಕಾರವನ್ನುಅದು ಹೊಂದುವಂತೆ ಮನಸ್ಸಿಗೂ ಯಾವುದೇಆಕಾರವಿರುವುದಿಲ್ಲ,ಯಾವುದರಲ್ಲಿಅದನ್ನು ಪ್ರೇರೇಪಿಸುತ್ತೇವೆಯೋಅದರಂತೆ ಆಗುತ್ತದೆ.ಬಹಿರ್ಮುಖವಾಗಿಹರಿದು ಶಬ್ದ ಸ್ಪರ್ಶಾದಿ ವಿಷಯಗಳಕಡೆ ಸಾಗಿದಾಗ ಸಂಸಾರವಾಗುವಮನಸ್ಸು, ಅಂತರ್ಮುಖವಾಗಿಇಳಿದು ಆತ್ಮ ಸಾಕ್ಷಾತ್ಕಾರದಕಡೆಗೆ ಸಾಗಿದರೆ ಅದುವೇಶಿವಸ್ವರೂಪವಾಗುತ್ತದೆ.ಮನಸ್ಸನ್ನುಅಂತರ್ಮುಖಗೊಳಿಸಲು ಧ್ಯಾನ ಮೊದಲಾದಅಧ್ಯಾತ್ಮಸಾಧನೆ ಅವಶ್ಯಕವಾಗಿದೆ. ಕೀಟವುಭ್ರಮರದ ನಿರಂತರ ಧ್ಯಾನದಿಂದ ಅದುಭ್ರಮರವೇ ಆಗುವಂತೆ ಮನುಷ್ಯನುನಿರಂತರ ಶಿವಧ್ಯಾನ ಮಾಡುವುದರಿಂದಶಿವಸ್ವರೂಪನೇ ಆಗುತ್ತಾನೆ ಎಂದುಜಗದ್ಗುರುಗಳು ವಿವರಿಸಿದರು.
ಕಾರ್ಯಕ್ರಮದಲ್ಲಿಅಖಿಲ ಭಾರತ ವೀರಶೈವ ಲಿಂಗಾಯತಮಹಾಸಭೆ ರಾಷ್ಟ್ರೀಯ ಅಧ್ಯಕ್ಷಈಶ್ವರ ಖಂಡ್ರೆ,ಶಾಸಕಸಮರ್ಥ ಶಾಮನೂರು,ದಾವಣಗೆರೆಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ,ಹಿರಿಯಅಧಿಕಾರಿಗಳಾದ ವಿಶ್ವನಾಥ ಹಿರೇಮಠ,ಮಂಜುನಾಥಬಳ್ಳಾರಿ ಮತ್ತಿತರರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿಡೋಣೂರು ಚಾನುಕೋಟಿ,ಅಕ್ಕಿಆಲೂರು ಶ್ರೀಗಳು ಸಮ್ಮುಖ ವಹಿಸಿದ್ದರು.ವಿಭೂತಿಪುರ,ಶಿವಗಂಗೆಮತ್ತಿತರ ಮಠಗಳ ಶ್ರೀಗಳು ಮತ್ತಿತರರುಉಪಸ್ಥಿತರಿದ್ದರು.