ಧ್ಯಾನ ಮಂದಿರವು ಧ್ಯಾನದ ಸ್ಥಳ ಆಗಿರುವುದರ ಜೊತೆಗೆ, ಭಾರತದಾದ್ಯಂತ ಅಳಿವಿನಂಚಿನಲ್ಲಿರುವ ವಿವಿಧ ಹಸ್ತಕಲೆಗಳು ಮತ್ತು ಕಲಾವಿದರಿಗೆ ವೇದಿಕೆಯನ್ನು ಒದಗಿಸಿದೆ. ಇದರಲ್ಲಿ ವಾರ್ಲಿ, ಮಧುಬನಿ, ಪಟ್ಟಚಿತ್ರ, ತಂಜಾವೂರು, ಸೋಹ್ರಾಯ್, ಕೊಹ್ಬರ್, ಗೊಂಡ್ ಮತ್ತು ಪಿಚ್ವಾಯಿ ಕಲೆಗಳು ಸೇರಿವೆ. ಇಲ್ಲಿನ ಸೀಲಿಂಗ್ ಹಿತವಾದ ಮತ್ತು ಸೂಕ್ಷ್ಮವಾದ ಮಂಡಲ ಕಲೆಯಿಂದ ಅಲಂಕರಿಸಲ್ಪಟ್ಟಿದೆ.