ಕಟಕೋಳ: ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಬೆಳಗಾವಿ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಚಾರಿಟಬಲ್ ಆಸ್ಪತ್ರೆ ಸಹಯೋಗದೊಂದಿಗೆ ಶನಿವಾರ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷಧ ವಿತರಣೆ ಕಾರ್ಯಕ್ರಮ ಜರುಗಿತು. ಶಿಬಿರದಲ್ಲಿ 573 ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಗೆ ಒಳಪಟ್ಟರು. ವಿವಿಧ ವಿಭಾಗಗಳ ತ ವೈದ್ಯರಿಂದ ಚರ್ಮರೋಗ, ಕಣ್ಣಿನ ತಪಾಸಣೆ, ಮೂಳೆಚಿಕಿತ್ಸೆ, ಚಿಕ್ಕ ಮಕ್ಕಳ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು. ಅಗತ್ಯವಿರುವವರಿಗೆ ಉಚಿತ ಔಷಧ ವಿತರಿಸಲಾಯಿತು. ಸಂಸ್ಥೆಯ ಅಧ್ಯೆ ಮೃಣಾಲಿನಿ ಪಟ್ಟಣ, ನಿರ್ದೇಶಕ ಎಸ್.ಆರ್.ನವರಕ್ಕಿ, ಡಾ.ಶ್ರೀಶಾನ್ ಕೆ.ಎನ್., ಡಾ.ಅಭಿನವ ಎಂ., ಡಾ.ಶಿವ ಯಲಂಗು, ಡಾ.ಜಿ.ಕೃಷ್ಣ, ಡಾ.ಅದಿತಿ ಎಚ್. ಇದ್ದರು.