ವೈದ್ಯಕೀಯ ಸಿಬ್ಬಂದಿ ಸೇವೆ ಪ್ರಶಂಸಾರ್ಹ

ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಬುಧವಾರ ಜರುಗಿದ  ತುರ್ತು ವೈದ್ಯಕೀಯ ದಿನಾಚರಣೆಯಲ್ಲಿ ನವೀನ ಎನ್., ಡಾ.ಸಂಜಯ ಕಂಬಾರ, ಡಾ.ರಿಕ್ಕಿ ಪಾಟೀಲ ಇತರರು ಪಾಲ್ಗೊಂಡಿದ್ದರು.
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಬುಧವಾರ ಜರುಗಿದ ತುರ್ತು ವೈದ್ಯಕೀಯ ದಿನಾಚರಣೆಯಲ್ಲಿ ನವೀನ ಎನ್., ಡಾ.ಸಂಜಯ ಕಂಬಾರ, ಡಾ.ರಿಕ್ಕಿ ಪಾಟೀಲ ಇತರರು ಪಾಲ್ಗೊಂಡಿದ್ದರು.
Published on
ಬೆಳಗಾವಿ: ತುರ್ತು ವೈದ್ಯಕೀಯ ವಿಭಾಗವು ಆಸ್ಪತ್ರೆ ಪ್ರಮುಖ ಆಧಾರಸ್ತಂಭವಾಗಿದೆ. ಅಪಘಾತಗಳು, ಹೃದಯಾಘಾತ, ಸ್ಟ್ರೋಕ್, ವಿಷಸೇವನೆ, ಗಂಭೀರ ಗಾಯಗಳು ಹಾಗೂ ಇತರ ಜೀವಾಪಾಯದ ಪರಿಸ್ಥಿತಿಗಳಲ್ಲಿ ರೋಗಿಯ ಜೀವ ಉಳಿಸುವ ಮೊದಲ ಜವಾಬ್ದಾರಿ ತುರ್ತು ವೈದ್ಯಕೀಯ ತಂಡದ ಮೇಲಿದೆ. ಇವರ ತ್ವರಿತ ನಿರ್ಧಾರ, ಪರಿಣತಿ ಹಾಗೂ ಮಾನವೀಯ ಸೇವೆ ಪ್ರತಿದಿನ ಅನೇಕ ಜೀವಗಳನ್ನು ಉಳಿಸುತ್ತಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಹೇಳಿದರು.
ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಜರುಗಿದ ತುರ್ತು ವೈದ್ಯಕೀಯ ದಿನ ಆಚರಣೆಯಲ್ಲಿ ಅವರು ಮಾತನಾಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ ಎನ್. ಮಾತನಾಡಿ, ತುರ್ತು ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸುವುದು ಹಾಗೂ ಮುಂಚೂಣಿ ಸಿಬ್ಬಂದಿಗೆ ಅಗತ್ಯ ಬೆಂಬಲ, ಸುಕ್ಷತೆ ಹಾಗೂ ಪ್ರೋತ್ಸಾಹಕಾರಿ ವಾತಾವರಣ ನಿರ್ಮಿಸಲು ಎಲ್ಲರೂ ಕೈಜೋಡಿಸೋಣ ಎಂದರು.
ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರಿಕ್ಕಿ ಪಾಟೀಲ ಮಾತನಾಡಿ, ತುರ್ತು ವೈದ್ಯಕೀಯ ವಿಭಾಗ ಎಂದಿಗೂ ನಿದ್ರೆ ಮಾಡದ ವಿಭಾಗವಾಗಿದ್ದು, ಜೀವಾಪಾಯದ ಕ್ಷಣಗಳಲ್ಲಿ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿ ಜೀವ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುತ್ತಾರೆ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net