ಸಂಸ್ಕಾರ ಕಲಿಸುವ ಮಾಧ್ಯಮ ರಂಗಭೂಮಿ

ಕಲಬುರಗಿ ರಂಗಾಯಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಗೆ ಸಿಯುಕೆ ಪ್ರಾಧ್ಯಾಪಕ ಪ್ರೊ.ಬಸವರಾಜ ಡೋಣೂರ ಚಾಲನೆ ನೀಡಿದರು. ಡಾ.ಸುಜಾತಾ ಜಂಗಮಶೆಟ್ಟಿ, ಎಚ್​.ಎಸ್​.ಬಸವಪ್ರಭು, ಶ್ರುತಿ ಶಿಲ್ಪಿ ರಾಮಯ್ಯ, ಶಿವಣ್ಣ ಮೋತಿ ಇದ್ದರು.
ಕಲಬುರಗಿ ರಂಗಾಯಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಗೆ ಸಿಯುಕೆ ಪ್ರಾಧ್ಯಾಪಕ ಪ್ರೊ.ಬಸವರಾಜ ಡೋಣೂರ ಚಾಲನೆ ನೀಡಿದರು. ಡಾ.ಸುಜಾತಾ ಜಂಗಮಶೆಟ್ಟಿ, ಎಚ್​.ಎಸ್​.ಬಸವಪ್ರಭು, ಶ್ರುತಿ ಶಿಲ್ಪಿ ರಾಮಯ್ಯ, ಶಿವಣ್ಣ ಮೋತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಪ್ರಾಧ್ಯಾಪಕ ಪ್ರೊ.ಬಸವರಾಜ ಡೋಣೂರ ಅಭಿಮತ
  • ಕಲಬುರಗಿ ರಂಗಾಯಣದಲ್ಲಿ ಕಾರ್ಯಕ್ರಮ
ಕಲಬುರಗಿ: ರಂಗಭೂಮಿ ಕೇವಲ ಮನರಂಜನೆ ಸಾಧನವಲ್ಲ, ಅದು ಮನುಷ್ಯನಿಗೆ ಸಭ್ಯತೆ, ನಾಗರಿಕತೆ ಮತ್ತು ಸಂಸ್ಕಾರ ಕಲಿಸುವಂಥ ಶಕ್ತಿಯುಳ್ಳ ಅದ್ಭುತ ಮಾಧ್ಯಮ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್​ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೋಣೂರ ಹೇಳಿದರು.
ನಗರದ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರನ್ನು ನೇರವಾಗಿ ತಲುಪುವ ಮತ್ತು ಪ್ರಭಾವಿಸುವ ಸಾಮರ್ಥ್ಯ ಪ್ರದರ್ಶನ ಕಲೆಗಳಿಗಿದೆ. ವಿಶೇಷವಾಗಿ ನಾಟಕಕ್ಕಿದೆ. ಸಮಾಜ ಇಂದಿಗೂ ಕಲಾವಿದರನ್ನು ಮಾದರಿಯಾಗಿ ನೋಡುತ್ತದೆ. ಪ್ರೇಕ್ಷಕರು ಕಲಾವಿದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂದರು.
ವಾಣಿಜ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಎಚ್​.ಎಸ್​. ಬಸವಪ್ರಭು ಮಾತನಾಡಿ, ದೂರದರ್ಶನ ಜನರಿಗೆ ಕೇವಲ ಪ್ರಖ್ಯಾತಿ ಮತ್ತು ಹಣ ನೀಡುತ್ತದೆ. ಆದರೆ ರಂಗಭೂಮಿ ವ್ಯಕ್ತಿಯನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.
ಸಮಾಜ ಸುಧಾರಣೆಗೆ ನಾಟಕ ಗಟ್ಟಿ ಮಾಧ್ಯಮ. ಪ್ರಸ್ತುತ ಸಮಾಜದಲ್ಲಿ ಶಾಂತಿ, ಸಹನೆ, ಪ್ರೀತಿ ಮತ್ತು ಸೌಹಾರ್ದದಂತಹ ಮೌಲ್ಯಗಳು ಣಿಸುತ್ತಿದ್ದು, ಹೊಸ ಚೈತನ್ಯ ತುಂಬಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಅತ್ಯಂತ ಪ್ರಬಲ ಮಾಧ್ಯಮ ಎಂದರು.
ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, 1949ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ರಂಗಸಂಸ್ಥೆ ಹಾಗೂ 1962ರಿಂದ ಆರಂಭವಾದ ಈ ದಿನಾಚರಣೆ ಇಂದು ಜಗತ್ತಿನಾದ್ಯಂತ ರಂಗಭೂಮಿಯ ಕಂಪು ಪಸರಿಸುತ್ತಿದೆ. ರಂಗಾಯಣ ಕಲಾವಿದ ಮಹಾಂತೇಶ ತಂದೆಯವರು ಬಯಲಾಟದಂತಹ ಜನಪದ ಕಲೆ ಉಳಿಸಿಕೊಂಡು ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಗಲು ವೇಷ ಕಲಾವಿದ ಶಿವಣ್ಣ ಮೋತಿ ಅವರು ಕಲೆಯಲ್ಲಿ ಸಾಗಿದ ತಮ್ಮ ಜೀವ, ಪ್ರಸ್ತುತ ಸಾಗುತ್ತಿರುವ ಕಲೆ ಬಗ್ಗೆ ಮಾತನಾಡಿ, ಆಧುನಿಕತೆ ಅಬ್ಬರ ಹಾಗೂ ಬದಲಾದ ಕಾಲಟ್ಟದಲ್ಲಿ ಗ್ರಾಮೀಣ ಭಾಗದ ಸಾಂಪ್ರದಾಯಿಕ ಕಲೆಗಳು ಸೊರಗುತ್ತಿವೆ. ರಂಗಭೂಮಿ ಮತ್ತು ಬಯಲಾಟದಂತಹ ಕಲೆಗಳು ಇಂದು ಟಿವಿ ಹಾಗೂ ಮೊಬೈಲ್​ ಹಾವಳಿಯಿಂದಾಗಿ ಜನಮಾನಸದಿಂದ ದೂರ ಸರಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ ಕಲೆಗೆ ಮಾರುಹೋಗಿ ಗ್ರಾಮದ ಗೌಡರು, ದೇಶಪಾಂಡೆಗಳು ಕಲಾವಿದರಿಗೆ ಎಕರೆಗಟ್ಟಲೆ ಜಮೀನು ದಾನವಾಗಿ ನೀಡುತ್ತಿದ್ದರು. ಆದರೆ ಇಂದು ಕಲಾವಿದರಿಗೆ ಬದುಕು ನಡೆಸುವುದು ಕಷ್ಟಕರವಾಗಿದೆ. ತಬಲಾ, ಹಾಮೋರ್ನಿಯಂ ಅಂತಹ ಮೂಲ ವಾದ್ಯಗಳನ್ನು ನಂಬಿ ಬದುಕುತ್ತಿರುವವರ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸತ ಶ್ರುತಿ ಶಿಲ್ಪಿ ರಾಮಯ್ಯ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಸುಖವಿಲ್ಲದೆ ಕಷ್ಟಪಡುತ್ತಿರುವವರಿಗೆ ಏಕತಾರಿಯ ನಾದ ನೆಮ್ಮದಿ ನೀಡಬಲ್ಲದು. ಈ ನಿಟ್ಟಿನಲ್ಲಿ ತಾವು ಜಾನಪದ ಏಕತಾರಿ ತರಬೇತಿ ಕೇಂದ್ರ ಸ್ಥಾಪಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಏಕತಾರಿಯ ಬೀಜ ಬಿತ್ತುತ್ತಿರುವುದಾಗಿ ಹೇಳಿದರು.
ಮನೆಯಲ್ಲಿ ಏಕತಾರಿಯ ನಾದ ಮೊಳಗುತ್ತಿದ್ದರೆ ಮಕ್ಕಳು ಮೊಬೈಲ್​ ವ್ಯಾಮೋಹದಿಂದ ದೂರ ಸರಿದು ಆಧ್ಯಾತ್ಮಿಕ ಜ್ಞಾನದತ್ತ ಆಕರ್ಷಿತರಾಗುತ್ತಾರೆ. ಮೊಬೈಲ್​ ಎಂಬುದು ಕೇವಲ ದು@ಖ&ಅಶಾಂತಿ ಮೂಲವಾಗಬಾರದು ಎಂದರು. ಕಲಬುರಗಿ ರಂಗಾಯಣ ರೆಪರ್ಟರಿ ಕಲಾವಿದರು ರಂಗಗೀತೆ ಹಾಡಿ ಗಮನಸೆಳೆದರು.
"

ರಂಗಭೂಮಿ ಇತಿಹಾಸ ಮೆಲುಕು ಹಾಕಿದ ಅವರು, ಏಣಗಿ ಬಾಳಪ್ಪ ಮತ್ತು ಗುಬ್ಬಿ ವೀರಣ್ಣ ಅವರಂತಹ ದಿಗ್ಗಜರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಗುಬ್ಬಿ ವೀರಣ್ಣ ಮಾಸ್ಟರ್​ ಫಿಲಾಸಫರ್​ ಆಗಿದ್ದರು. ಅಂತಹವರ ಹಾದಿಯಲ್ಲಿ ಇಂದಿನ ಕಲಾವಿದರು ಸಾಗುತ್ತಿರುವುದು ಸಂತಸದ ವಿಷಯ.

> ಪ್ರೊ.ಬಸವರಾಜ ಡೋಣೂರ

ಸಿಯುಕೆ ಇಂಗ್ಲಿಷ್​ ವಿಭಾಗದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net