ಚಿಂತಾಮಣಿ: ಕೈವಾರ ರಸ್ತೆಯ ಬನಹಳ್ಳಿ ಬಳಿ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಮೆಕ್ಯಾನಿಕ್ ಗಾಯಗೊಂಡಿದ್ದಾರೆ.
ಮಸ್ತೇನಹಳ್ಳಿಯ ನಿವಾಸಿ, ಸದ್ಯ ಕೋಲಾರ ತಾಲೂಕಿನ ಕಾಡಹಳ್ಳಿಯಲ್ಲಿ ವಾಸಿಸುತ್ತಿರುವ ಮುರಳಿ (36) ಗಾಯಗೊಂಡವರು.
ನಾಯಿಂದ್ರಹಳ್ಳಿ ಗೇಟ್ನಲ್ಲಿ ಕಾರು ಮೆಕ್ಯಾನಿಕ್ ಅಂಗಡಿ ಇಟ್ಟುಕೊಂಡಿರುವ ಮುರಳಿ ಜೂ.7ರಂದು ರಾತ್ರಿ ಕೆಲಸ ಮುಗಿಸಿ ಬೈಕ್ನಲ್ಲಿ ಕೈವಾರಕ್ಕೆ ಹೋಗುತ್ತಿದ್ದಾಗ ಬನಹಳ್ಳಿ ಬಳಿ ಎದುರುಗಡೆಯಿಂದ ಬಂದ ಬೈಕ್ ಚಾಲಕನ ಅಜಾಗರೂಕತೆಯಿಂದ ಮುರಳಿ ಬೈಕ್ಗೆ ಡಿಕ್ಕಿ ಹೊಡೆದಿದ್ದು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬನಹಳ್ಳಿಯ ಯುವಕರು ಗಾಯಾಳುವನ್ನು ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮುರಳಿ ಜೂ.8ರಂದು ಸ್ಥಳಿಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.