ಪ್ರಾಗೈತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಕ್ರಮ

ಸಿರಿಗೇರಿ ಸಮೀಪದ ತೆಕ್ಕಲಕೋಟೆಯಲ್ಲಿನ ಪ್ರಾಗೈತಿಹಾಸಿಕ ಹುಡೇದ ಗುಡ್ಡದ ಬಂಡೆಗಲ್ಲುಗಳ ಆದಿಮಾನವರ ರೇಖಾ ಚಿತ್ರಗಳು ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಂರಕ್ಷಣೆ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲಾ ಪುರಾತತ್ವ ಸಂರಕ್ಷಣಾ ಸಹಾಯಕ ಇಂಜಿನಿಯರ್ ರವಿ ಕೆ., ನಿವೃತ್ತ ಅಧಿಕಾರಿ ಪಾರ್ಶ್ವನಾಥ, ಹನುಮಂತಪ್ಪ ಇದ್ದರು.

Published on
ಸಿರಿಗೇರಿ: ತೆಕ್ಕಲಕೋಟೆಯಲ್ಲಿರುವ ಪ್ರಾಗೈತಿಹಾಸಿಕ ಹುಡೇದ ಗುಡ್ಡದ ಬಂಡೆಗಲ್ಲುಗಳ ಮೇಲೆ ಆದಿಮಾನವರ ರೇಖಾ ಚಿತ್ರಗಳು ಹಾಗೂ ಉಡೇಗೋಳ ರಸ್ತೆಯಲ್ಲಿನ ಬೂದಿದಿಬ್ಬ ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಅವುಗಳ ಸಂರಕ್ಷಣೆ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾ ಪುರಾತತ್ವ ಸಂರಕ್ಷಣಾ ಸಹಾಯಕ ಇಂಜಿನಿಯರ್ ರವಿ ಕೆ. ಮಾತನಾಡಿ, ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶನದಂತೆ ತೆಕ್ಕಲಕೋಟೆಯ ಪ್ರಾಗೈತಿಹಾಸಿಕ ಕಾಲದ ಬಂಡೆಗಲ್ಲು ರೇಖಾ ಚಿತ್ರಗಳು ಹಾಗೂ ಬೂದಿದಿಬ್ಬ ಸಂರಕ್ಷಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಪರಿಶೀಲಿಸಲಾಗುತ್ತಿದೆ ಎಂದರು.
ತೆಕ್ಕಲಕೋಟೆಯು ಪ್ರಾಗೈತಿಹಾಸಿಕ ಕಾಲದ ಮಹತ್ವದ ಸ್ಥಳವಾಗಿದ್ದು, ಇಲಾಖೆ ಇವುಗಳು ಸಂರಕ್ಷಣೆಗೆ ನೆರಳಿಗೆ ಛಾವಣಿ, ನಾಮಫಲಕ, ಸಂರಕ್ಷಣಾ ಕಟ್ಟೆ, ಮಾಹಿತಿ ಫಲಕಗಳನ್ನು ಹಾಕಲು ಹಾಗೂ ಆಯಾ ಸ್ಥಳಕ್ಕೆ ತಲುಪಲು ಅನುಕೂಲವಾಗುವಂತೆ ಮೆಟ್ಟಿಲು ವ್ಯವಸ್ಥೆ ಕಲ್ಪಿಸಲು ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು. 
ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ಪಾರ್ಶ್ವನಾಥ, ಸಿಬ್ಬಂದಿ ಹನುಮಂತಪ್ಪ, ಇತಿಹಾಸ ಸಂಶೋಧನಾರ್ಥಿ ಮನೋಹರ ಸಿ.ಎಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net