ಬೀದರ ಎಸ್‌ಪಿ ಗೆಸ್ಟ್ ಹೌಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಸತಿ, ಆಹಾರ, ಸಾರಿಗೆ, ಪ್ರಚಾರ, ಮೆರವಣಿಗೆ, ನೋಂದಣಿ, ಅತಿಥಿ ಸತ್ಕಾರ, ಸಾಂಸ್ಕೃತಿಕ, ಸ್ಮರಣ ಸಂಚಿಕೆ, ಮಹಿಳಾ ಸಮಿತಿಯಿಂದ ಹಿಡಿದು ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಸಮಿತಿ ತನಕ ಎಲ್ಲಾ ಉಪ ಸಮಿತಿಗಳ ಪ್ರಧಾನ ಸಂಚಾಲಕರು, ಸಂಚಾಲಕರು, ಸಹ ಸಂಚಾಲಕರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಸಮ್ಮೇಳನಕ್ಕೆ ಒಂದೊಂದು ಜವಬ್ದಾರಿ ವಹಿಸಿಕೊಂಡು ಸಹಕಾರ ನೀಡಿದವರನ್ನು ಗೌರವಿಸಲಾಯಿತು.