ಹೀಗಾಗಿ ಸೋಮವಾರ ಡಿಸಿ ಕಚೇರಿ ಆವರಣ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಚೆಂಬರ್ ರೈತರಿಂದ ಕೂಡಿದ್ದವು. ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿ ಹೊಲಗಳು ಸ್ವಚ್ಚಗೊಳಿಸಿ, ಬೀಜ ಮತ್ತು ರಸಗೊಬ್ಬರ ಖರೀದಿಗೆ ಮುಂದಾಗಿದ್ದು, ಇಲ್ಲಿ ಸಮಸ್ಯೆ ಎದುರಾಗಿದ್ದು, ಕಾಳಸಂತೆಯಲ್ಲಿ ಮಾರಾಟ ಜೋರಾಗಿದ್ದು, ಕೂಡಲೇ ತಡೆಯುವಂತೆ ರೈತ ಸಂಟನೆಗಳು ಮತ್ತು ಬಿಜೆಪಿ ಮುಖಂಡರು ಡಿಸಿ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.