ಔರಾದ್: ಮಾದಕ ವಸ್ತುಗಳ ಸೇವನೆಯಿಂದ ಯುವಜನರ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಗಂಭೀರ ಅಪಾಯ ಉಂಟುಮಾಡುತ್ತಿದೆ. ಯುವಕರು ಯಾವುದೇ ರೀತಿಯ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿಕೆ ಸುಭಾಷಾ ಬಹನಜಿ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಶೆಮುಕ್ತ ಯುವ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಸನದಿಂದ ದೂರವಿದ್ದು, ಉತ್ತಮ ದೆಹಿಕ ಹಾಗೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬೇಕು. ಯುವಕರು ಸದೃಢ ಭಾರತ ನಿಮಾರ್ಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್ಐ ಚಂದ್ರಶೇಖರ ನಿರ್ಣೆ, ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನ ನಡೆಸುವ ಪ್ರಮಾಣವಚನ ಬೋಧಿಸಿದರು. ಪಿಎಸ್ಐ ಬಸವರಾಜ ಕೋಟೆ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಯುವ ಚಿಂತಕ ಅಶೋಕ ಶೆಂಬೆಳ್ಳಿ, ನ್ಯಾಯವಾದಿ ಮಹಾದೇವ ಲಕ್ಕಾ, ಗಂಗಾರಡ್ಡಿ, ಅಂಬಾದಾಸ ನಳಗೆ ಮಾತನಾಡಿದರು.
ಶಾಂತಾ ಬಹನಜಿ ಅಭಿಯಾನದ ಉದ್ದೇಶ ಹಾಗೂ ಮಹತ್ವ ವಿವರಿಸಿದರು. ಶಿವು ಪಾಟೀಲ್ ಬುಕ್ಕಾ, ಸಂಗಪ್ಪ ಘಾಟೆ, ರಮೇಶ ಜಾಧವ, ಬಾಲಾಜಿ ಚಿಮ್ಮೆಗಾಂವ, ಡಾ.ಸರಸ್ವತಿ, ಸಂಗೀತಾ ವಲ್ಲೇಪುರೆ, ಶ್ರೀನಿವಾಸ ರಡ್ಡಿ, ದಿಲೀಪ ಇತರರಿದ್ದರು. ಗೋವಿಂದ ಪಾಟೀಲ್ ವಂದಿಸಿದರು. ಛಾಯಾಬಹನಜಿ ಸ್ವಾಗತಿಸಿ ನಿರೂಪಣೆ ಮಾಡಿದರು.