May the Srimatthi also become a center of wisdom that guides the weak.
Published on:
Copied
Follow Us
ಕೊರಟಗೆರೆ; ಧಾರ್ಮಿಕ ಕ್ಷೇತ್ರದ ಜತೆಗೆ ಶೈಕ್ಷಣಿಕ ಹಾಗೂ ಸವಾಜ ಸುಧಾರಣೆಯ ಕ್ಷೇತ್ರಗಳಲ್ಲಿಯೂ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದು ಡಾ. ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಎಲೆರಾಂಪುರದಲ್ಲಿರುವ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿರಾ ತಾಲೂಕಿನ ರಂಗನಾಥ ವಿದ್ಯಾ ಸಂಸ್ಥೆ, ವಾರ್ಷಿಕ ಸಭೆ ಹಾಗೂ ಸಂಸ್ಥೆಯನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ವಾತನಾಡಿದರು.
ಶ್ರೀಮಠವು ಕೇವಲ ಪೂಜೆಪರಂಪರೆಗಳ ಕೇಂದ್ರವಾಗಿರದೆ, ಸವಾಜದ ದುರ್ಬಲ ವರ್ಗಗಳಿಗೆ ದಾರಿ ತೋರಿಸುವ ಪ್ರಜ್ಞಾಕೇಂದ್ರವಾಗಬೇಕು. ವಿಶೇಷವಾಗಿ ಗ್ರಾಮೀಣ ಭಾಗದ ಬಡ ಮತ್ತು ಶಿಕ್ಷಣ ವಂಚಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಪ್ರಮುಖ ಧ್ಯೇಯವಾಗಲಿದೆ. ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಾಗುತ್ತದೆ ಎಂದು ತಿಳಿಸಿದರು.
ಶಿರಾ ತಾಲೂಕಿನ ಕಠಾರವೀರನಹಳ್ಳಿ, ಪಂಜಿಗನಹಳ್ಳಿ ಹಾಗೂ ದೊಡ್ಡ ಆಲದ ಮರ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಸಂಸ್ಥೆಯ ಟ್ರಸ್ಟಿಗಳಾದ ಸತೀಶ್ ಮಲ್ಲಣ್ಣ ಅವರು ಶ್ರೀಮಠಕ್ಕೆ ಹಸ್ತಾಂತರಿಸಿದ್ದು, ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಸಂಕಲ್ಪಕ್ಕೆ ಚಾಲನೆ ದೊರೆತಂತಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಹಿನ್ನಡೆ, ಸಾವಾಜಿಕ ಅಡೆತಡೆಗಳಿಂದಾಗಿ ಶಾಲೆ ಬಿಟ್ಟ ಮಕ್ಕಳನ್ನು ಮರುಶಾಲೆಗೆ ತರಲು ವಿಶೇಷ ಜಾಗೃತಿ ಕಾರ್ಯಕ್ರಮಗಳು, ವಿದ್ಯಾರ್ಥಿವೇತನ ಯೋಜನೆಗಳು ಹಾಗೂ ಗುಣಮಟ್ಟದ ಬೋಧನಾ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.
ನಿರ್ದೇಶಕರಾದ ರಾಮಕೃಷ್ಣ, ರಾಜಣ್ಣ, ವಾರುತಿ, ಮಂಜುನಾಥ್, ರಾವೇಂದ್ರ, ಗೋವಿಂದರಾಜು ಇದ್ದರು.