ಭಜನೆ, ಭಕ್ತೀಗಿತೆಗಳ ಗತವೈಭವ ಮರುಕಳಿಸಲಿ

ಯಾದಗಿರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜನಪದ ಸಂಗೀತೋತ್ಸವವನ್ನು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ವೈಜನಾಥ ಹಿರೇಮಠ, ಶರಣು ಎಸ್​.ನಾಟೇಕಾರ ಇತರರಿದ್ದರು.
ಯಾದಗಿರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜನಪದ ಸಂಗೀತೋತ್ಸವವನ್ನು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ವೈಜನಾಥ ಹಿರೇಮಠ, ಶರಣು ಎಸ್​.ನಾಟೇಕಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​ ಆಶಯ
  • ಜನಪದ ಸಂಗೀತೋತ್ಸವ ಸಾಂಸತಿಕ ಕಾರ್ಯಕ್ರಮ
ಯಾದಗಿರಿ: ಕಲೆ, ಸಂಸ್ಕೃತಿ ಉಳಿಯಬೇಕೆಂದರೆ ಪರಂಪರಾಗತ ಬಂದಿರುವ ಭಜನೆ, ಭಕ್ತೀಗಿತೆಗಳ ಗಾಯನ ಕಾರ್ಯಕ್ರಮಗಳು ನಿಯಮಿತ ನಡೆಯಬೇಕು ಎಂದು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ವರ ಸಾಮ್ರಾಟ ಸಂಗೀತ, ಸಾಮಾಜಿಕ ಮತ್ತು ಸಾಂಸತಿಕ ಕಲಾ ಸಂಸ್ಥೆ ಸಹಯೋಗದಡಿ ಗುರುವಾರ ಏರ್ಪಡಿಸಿದ್ದ ಜನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತಕ್ಕೆ ಮಳೆ ಬರಿಸುವಂತಹ ಶಕ್ತಿ ಇದೆ. ಹಿಂದೆ ಪ್ರತಿ ಊರಲ್ಲಿ ಭಜನೆ ನಡೆಯುತ್ತಿತ್ತು. ಇಂದು ಸಹ ವರುಣ ದೇವನ ಪ್ರಾರ್ಥನೆಗಾಗಿ ಸಪ್ತಭಜನೆ ನಡೆಯುತ್ತಿರುವುದನ್ನು ಕಾಣಬಹುದು ಎಂದರು.
ಹಿರಿಯ ಪತ್ರಕರ್ತ ವೈಜನಾಥ ಹಿರೇಮಠ ಮಾತನಾಡಿ, ಸರ್ಕಾರ ಕಲೆ-ಕಲಾವಿದರು, ಸಂಸ್ಕೃತಿ ಬೆಳವಣಿಗೆಗೆ ಹೆಚ್ಚಿನ ಅನುದಾನ ನೀಡಬೇಕು. ಈ ಹಿಂದಿನಂತೆ ದೇವಸ್ಥಾನ, ಮಠ-ಮಾನ್ಯಗಳಲ್ಲಿ ಭಜನೆ, ಭಕ್ತೀಗಿತೆ ಗಾಯನ ಕಡ್ಡಾಯ ಮಾಡಬೇಕಿದೆ. ಸಾಂಸ್ಕೃತಿಕ ಸಂಘ ಸಂಸ್ಥೆಗಳು ಕೇವಲ ಸರ್ಕಾರಕ್ಕಾಗಿ ಕಾರ್ಯಕ್ರಮ ಮಾಡದೆ ವಾರಕ್ಕೊಮ್ಮೆ ಕಡ್ಡಾಯವಾಗಿ ಭಜನೆ ಹಮ್ಮಿಕೊಳ್ಳುವ ಮೂಲಕ ಗತವೈಭವ ಮರಳಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಸ್ವರ ಸಾಮ್ರಾಟ ಸಂಗೀತ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಅಧ್ಯಕ್ಷ ಶರಣು ಎಸ್​.ನಾಟೇಕಾರ ಅಧ್ಯಕ್ಷತೆ ವಹಿಸಿದ್ದರು. ನಾಯ್ಕಲ್​ ಗ್ರಾಪಂ ಮಾಜಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಅನಸುಗೂರು, ಗುರುಮಠಕಲ್​ ಪುರಸಭೆ ಸದಸ್ಯ ಬಾಬು ತಲಾರಿ, ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಮಹಾಂತಯ್ಯ ಸ್ವಾಮಿ ಖಾನಾಪುರ, ವಿನೋದಕುಮಾರ ಶಿರಗೋಳ, ಶಿವಶರಣಪ್ಪ ವಾಡಿ ಇತರರಿದ್ದರು. ಚಂದ್ರಕಾಂತ ಚಲುವಾದಿ ಸ್ವಾಗತಿಸಿದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಣೆ ಮಾಡಿದರು. ಶರಣು ವಂದಿಸಿದರು.
ತಿಪ್ಪಣ್ಣ ಲಂಡನಕರ್​ (ಹೋರಾಟಗಾರ), ಚಂದ್ರಶೇಖರಯ್ಯ ಸ್ವಾಮಿ (ಬಯಲಾಟ), ಗಿರೀಶ ಹಟ್ಟೇರಕರ್​ (ಮಾಧ್ಯಮ), ಮಲ್ಲಿಕಾರ್ಜುನ ಜೇವರ್ಗಿ (ಸಾಮಾಜಿಕ ಸೇವೆ), ರುದ್ರಸ್ವಾಮಿ ಚಿಕ್ಕಮಠ (ಸಾಹಿತ್ಯ) ಅವರಿಗೆ ಗಿರಿನಾಡು ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 50ಕ್ಕೂ ಹೆಚ್ಚು ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net