ಚಿಂತಾಮಣಿ ನಗರದ ಶ್ರೀನಾಗನಾಥೇಶ್ವರಸ್ವಾಮಿ ಜೀಣೋರ್ದ್ದಾರಕ್ಕೆ ಒತ್ತಾಯಿಸಿ ನಾಗನಾಥೇಶ್ವರಸ್ವಾಮಿ ಯುವಕರ ಸೇವಾ ಸಮಿತಿ ಹಾಗೂ ಶಿವ ಭಕ್ತ ಸಮೂಹ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟಿಸಿ , ಗ್ರೇಡ್2 ತಹಸೀಲ್ದಾರ್ ರಾಜೇಂದ್ರಗೆ ಮನವಿ ಸಲ್ಲಿಸಿದರು.
ಚಿಂತಾಮಣಿ: ತಾಲೂಕಿನ ಶ್ರೀ ನಾಗನಾಥೇಶ್ವರ ಸ್ವಾಮಿ ದೇವಾಲಯವು 6&7 ವರ್ಷಗಳಿಂದ ಜೀಣೋರ್ದ್ಧಾರ ಕಾಣದೆ ರ್ನಿಲಕ್ಷ$್ಯಕ್ಕೊಳಗಾಗಿದ್ದು, ಕೂಡಲೇ ದೇಗುಲ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಭಕ್ತರು, ಸ್ಥಳಿಯ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ಎನ್.ಎನ್.ಟಿ.ಬಡಾವಣೆಯಲ್ಲಿನ ಶ್ರೀ ನಾಗನಾಥೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ವಿವಿಧ ೂಷಣೆಗಳೊಂದಿಗೆ ಮತ್ತು ತಮಟೆ ವಾಹನದೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣೆಗೆಯಲ್ಲಿ ಬಂದ ನಾಗನಾಥೇಶ್ವರಸ್ವಾಮಿ ಯುವಕರ ಸೇವಾ ಸಮಿತಿ ಹಾಗೂ ಶಿವ ಭಕ್ತ ಸಮೂಹ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಮುಖಂಡ ಅಗ್ರಹಾರ ಮೋಹನ್ ಮಾತನಾಡಿ, ಚೋಳರ ಆಳ್ವಿಕೆಯ ಸಂದರ್ಭದಲ್ಲಿ ಸ್ಥಾಪಿಸಲ್ಪಟ್ಟಿದ್ದು ಎನ್ನಲಾದ ಮತ್ತು ಶಿವಾಜಿ ವಂಶಸ್ಥರ ಆಳ್ವಿಕೆಯ ಇತಿಹಾಸ ಹೊಂದಿರುವ ಪ್ರಾಚಿನ ದೇವಾಲಯಕ್ಕೆ ಗತವೈಭವವನ್ನು ಮರಳಿ ತರಬೇಕಾದದ್ದು ಅವಶ್ಯಕವಾಗಿದೆ. ಆದರೆ, ದೇವಾಲಯದ ಜೀಣೋರ್ದ್ಧಾರಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಶ್ರಮಿಸಬೇಕಿದ್ದವರು ರಾಜಕೀಯ ಪ್ರತಿಷ್ಠೆಗೆ ಒಳಗಾಗಿ ದೇವಾಲಯವನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯವು ಮುಜರಾಯಿ ಇಲಾಖೆ ಸುಪರ್ದಿಗೆ ಬರುತ್ತಿದ್ದು, ತಹಸೀಲ್ದಾರರು ಇದರ ಖಜಾಂಚಿ ಹಾಗೂ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಆದರೂ ಅಭಿವೃದ್ಧಿ ಕಾರ್ಯಗಳು ಕಡೆಗಣಿಸಲ್ಪಟ್ಟಿವೆ. ಕೆಲವು ವರ್ಷಗಳ ಹಿಂದೆ ಆರಂಭವಾದ ಜೀಣೋರ್ದ್ಧಾರ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಪ್ರಸ್ತುತ ಅಭಿವೃದ್ಧಿ ಟ್ರಸ್ಟ್ ಸದಸ್ಯರು ಅಭಿವೃದ್ಧಿ ನಡೆಸದೆ ಇರುವುದರಿಂದ ದೇವಾಲಯದ ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆ ಎಂದು ಆರೋಪಿಸಿದರು.
ಇದರಿಂದ ಬರುವ ಭಕ್ತರ ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗುತ್ತಿದ್ದು, ಹಿಂದೂ ಸಂಪ್ರದಾಯಕ್ಕೆ ಧಕ್ಕೆಯಾಗುತ್ತಿದೆ. ದೇವಾಲಯದ ಹುಂಡಿಯ ಕಾಣಿಕೆ ಸಂಗ್ರಹಣೆಗೆ ಮಾತ್ರ ಸೀಮಿತವಾಗದೆ, ಇದರ ಜೀಣೋರ್ದ್ಧಾರಕ್ಕೆ ಅಧಿಕಾರಿಗಳು ಮುಂದಾಗಬೇಕು. ತಪ್ಪಿದಲ್ಲಿ ತಹಸೀಲ್ದಾರರ ಕಚೇರಿ ಮುಂಭಾಗದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಗ್ರೇಡ್2 ತಹಸೀಲ್ದಾರ್ ರಾಜೇಂದ್ರ
ಮನವಿ ಪ್ರತಿಗಳನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸುವುದಾಗಿ ಭರವಸೆ ನೀಡಿದರು.