ಐತಿಹಾಸಿಕ ಹಬ್ಬದಾಚರಣೆ ಶಾಂತವಾಗಿರಲಿ

ಕುದರಿಮೋತಿಯಲ್ಲಿ ಮೊಹರಂ ಹಬ್ಬದ ನಿಮಿತ್ತ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಬೇವೂರು ಠಾಣೆ ಪಿಎಸ್‌ಐ ಟಿ.ಗುರುರಾಜ ಮಾತನಾಡಿದರು. ದಳಪತಿ ಹನಮಗೌಡ ಪೊಲೀಸ್ ಪಾಟೀಲ್, ಪಿಎಸ್‌ಐ ಸಂಗನಗೌಡ, ವೇಷಗಾರ ಸಮಾಜದ ಮುಖಂಡರಾದ ಚಿನ್ನಪ್ಪ, ದುರಗಪ್ಪ ದೊಪಂ, ಚಂದಪ್ಪ, ರಮೇಶ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬೇವೂರು ಠಾಣೆ ಪಿಎಸ್‌ಐ ಟಿ.ಗುರುರಾಜ ಮನವಿ
ಕುಕನೂರುಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಶಾಂತಿಯುತವಾಗಿ ಮೊಹರಂ ಹಬ್ಬ ಆಚರಿಸಬೇಕು ಎಂದು ಬೇವೂರು ಠಾಣೆ ಪಿಎಸ್‌ಐ ಟಿ.ಗುರುರಾಜ ಹೇಳಿದರು.
ಕುದರಿಮೋತಿ ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬ ಆಚರಣೆ ವೇಳೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪರಸ್ಪರ ಸಹಬಾಳ್ವೆ ಮತ್ತು ಸಹೋದರತ್ವ ಮನೋಭಾವದಿಂದ ಹಬ್ಬ ಆಚರಿಸಬೇಕು ಎಂದರು. 
ದಳಪತಿ ಹನಮಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ಗ್ರಾಮಸ್ಥರು ಹಾಗೂ ಯುವಕರು ಕೈಜೋಡಿಸಿ ಹಬ ಯಶಸ್ವಿಗೊಳಿಸಬೇಕೆಂದರು. ರಾಜ್ಯಕ್ಕೆ ಹೆಸರುವಾಸಿಯಾದ ಇಲ್ಲಿನ ಮೊಹರಂ ಅನ್ನು ಯಾವುದೇ ರೀತಿಯ ಗಲಾಟೆಗಳಿಗೆ ಅವಕಾಶ ಕೊಡದಂತೆ ಆಚರಿಸೋಣ ಎಂದರು.
ಪಿಎಸ್‌ಐ ಸಂಗನಗೌಡ, ವೇಷಗಾರ ಸಮಾಜದ ಮುಖಂಡರಾದ ಚಿನ್ನಪ್ಪ, ದುರಗಪ್ಪ ದೊಪಂ, ಚಂದಪ್ಪ, ರಮೇಶ, ಪ್ರಮುಖರಾದ ಬಸಪ್ಪ ದೊಡ್ಡಮನಿ, ಸುಭಾಷ್ ಈಡಿಗೇರ, ಡಾ.ಹುಸೇನ್‌ಬಾಷಾ ಮಕಾಂದಾರ್, ಹಾಸೀಮ್ ಸಾಬ್ ಮಕಾಂದಾರ್, ಮಾಬುಸಾಬ್ ಮಕಾಂದಾರ್, ಶರಣಯ್ಯ ಜಂಗಮೂರು, ರವಿ ಕಟಗಿ, ದ್ಯಾಮಣ್ಣ ಉಚ್ಚಲಕುಂಟಿ, ಮಹಾಂತಪ್ಪ ಶಿಡ್ನಳ್ಳಿ, ಶಿವಪ್ಪ ಬೇವಿನಗಿಡದ್, ಉಮೇಶ ತಲ್ಲೂರ, ಪಂಪಾಪತಿ ವಣಗೇರಿ, ಮಂಜುನಾಥ ಗಟ್ಟೆಪ್ಪನವರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net