ಕೋಡಿನೇಟರ್ ಡಾ.ಲಿಖಿತಾ ಮಾತನಾಡಿ, ನಿತ್ಯ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂತಹ ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಸುವುದರಿಂದ ಗ್ರಾಮಾಂತರ ಪ್ರದೇಶದವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ. ಅಪಘಾತ, ಮೂತ್ರಪಿಂಡ ತೊಂದರೆ, ನರರೋಗ, ನವಜಾತ ಶಿಶುಗಳ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್, ಸುಟ್ಟಗಾಯ ಇತ್ಯಾದಿಗಳ ತಪಾಸಣೆ ಮಾಡಲಾಗುವುದು ಎಂದರು.