ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲಿ

ತಾಳಿಕೋಟೆ ಪಟ್ಟಣದ ಆಶ್ರಯ ಬಡಾವಣೆಯ ನಮ್ಮ ಕ್ಲಿನಿಕ್‌ನಲ್ಲಿ ಜನ ಆರೋಗ್ಯ ಸಮಿತಿ ಸಭೆ ನಡೆಯಿತು. ಶಿವಾನಂದ ಜುಮನಾಳ, ವಿಕಾಸ ರುಮಾಲ, ಸಂದೀಪ್ ವಠಾರ, ಬಸವರಾಜ ಕುಂಬಾರ, ಬಸವರಾಜ ಮಾಲಿಪಾಟೀಲ ಇತರರಿದ್ದರು.
ತಾಳಿಕೋಟೆ ಪಟ್ಟಣದ ಆಶ್ರಯ ಬಡಾವಣೆಯ ನಮ್ಮ ಕ್ಲಿನಿಕ್‌ನಲ್ಲಿ ಜನ ಆರೋಗ್ಯ ಸಮಿತಿ ಸಭೆ ನಡೆಯಿತು. ಶಿವಾನಂದ ಜುಮನಾಳ, ವಿಕಾಸ ರುಮಾಲ, ಸಂದೀಪ್ ವಠಾರ, ಬಸವರಾಜ ಕುಂಬಾರ, ಬಸವರಾಜ ಮಾಲಿಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಮ್ಮ ಕ್ಲಿನಿಕ್‌ನ ಆರೋಗ್ಯ ನಿರೀಕ್ಷಕ ವಿಕಾಸ ರುಮಾಲ ಹೇಳಿಕೆ
  • ಜನ ಆರೋಗ್ಯ ಸಮಿತಿ ಸಭೆ
ತಾಳಿಕೋಟೆ: ಸ್ವಚ್ಛತೆ ಜತೆಗೆ ಜನರ ಆರೋಗ್ಯ ಕಾಪಾಡುವುದು ಮುಖ್ಯವಾದುದ್ದಾಗಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸದಲ್ಲಿ ಕಾರ್ಯ ಪ್ರವೃತ್ತರಾಗೋಣವೆಂದು ಪಟ್ಟಣದ ಆಶ್ರಯ ಬಡಾವಣೆಯ ನಮ್ಮ ಕ್ಲಿನಿಕ್‌ನ ಆರೋಗ್ಯ ನಿರೀಕ್ಷಕ ವಿಕಾಸ ರುಮಾಲ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್ ಮತ್ತು ಪುರಸಭೆ ತಾಳಿಕೋಟೆ ಸಹಯೋಗದಲ್ಲಿ ಆಶ್ರಯ ಬಡಾವಣೆಯ ನಮ್ಮ ಕ್ಲಿನಿಕ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಆರೋಗ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜನರ ಆರೋಗ್ಯ ಸಂಪತ್ತು ಚೆನ್ನಾಗಿರಬೇಕೆಂದರೆ ಪಟ್ಟಣದ ಸ್ವಚ್ಚತೆಯಿಂದ ಇರಬೇಕೆಂದರೆ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಆಗಬೇಕು ಎಂದರು. ಪುರಸಭೆ ಆರೋಗ್ಯ ನಿರೀಕ್ಷಕ ಶಿವಾನಂದ ಜುಮನಾಳ ಮಾತನಾಡಿದರು.
ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ. ಶ್ರೀಗೌರಿ ಕಂತಲಗಾವಿ, ನೀರಲಗಿ, ಪುರಸಭೆ ಆರೋಗ್ಯ ನಿರೀಕ್ಷಕ ಶಿವಾನಂದ ಜುಮನಾಳ, ಕಿರಿಯ ಅಭಿಯಂತರ ಸಂದೀಪ್ ವಠಾರ, ಬಸವರಾಜ ಕುಂಬಾರ, ಬಸವರಾಜ ಮಾಲಿಪಾಟೀಲ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net