ಎಲ್ಲರಿಗೂ ಅಪಣ್ಣನ ಆದರ್ಶ ಮೈಗೂಡಲಿ

ನಂಜನಗೂಡು ತಾಲೂಕು ಆಡಳಿತ ಭವನದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ,  ಸ್ಮಿತಾ ರಾಮು, ನಂದಕಿಶೋರ್, ಬಸವರಾಜ್, ಬಿ.ಒ.ಮಹೇಶ್, ಶ್ರೀಕಂಠಸ್ವಾಮಿ ಇತರರು ಇದ್ದರು.
ನಂಜನಗೂಡು ತಾಲೂಕು ಆಡಳಿತ ಭವನದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಸ್ಮಿತಾ ರಾಮು, ನಂದಕಿಶೋರ್, ಬಸವರಾಜ್, ಬಿ.ಒ.ಮಹೇಶ್, ಶ್ರೀಕಂಠಸ್ವಾಮಿ ಇತರರು ಇದ್ದರು.
Published on
ನಂಜನಗೂಡು: ನಗರದ ತಾಲೂಕು ಅಡಳಿತ ಭವನದ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಾರಂಭ ಸರಳವಾಗಿ ಜರುಗಿತು.

ಶಾಸಕ ದರ್ಶನ್ ಧ್ರುವನಾರಾಯಣ ಸಮಾರಂಭವನ್ನು ಉದ್ಘಾಟಿಸಿದ ನಂತರ ಮಾತನಾಡಿ, 12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಾದಿ ಶರಣರು ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಅನುಭವ ಮಂಟಪದಲ್ಲಿ ವಿವಿಧ ಸಮಾಜದ ಶರಣರನ್ನು ಒಗ್ಗೂಡಿಸಿಕೊಂಡು 12ನೇ ಶತಮಾನದಲ್ಲಿ ಜಗತ್ತಿಗೆ ಶರಣರು ಸಮಾನತೆ ಸಂದೇಶವನ್ನು ಸಾರಿದರು. ಸಮಾನತೆ ಇಲ್ಲದ ಸ್ವಾತಂತ್ರೃ ಅಪೂರ್ಣ ಎಂದಿರುವ ಡಾ.ಅಂಬೇಡ್ಕರ್ ಅವರ ಸಾಲುಗಳ ಹಿನ್ನೆಲೆಯಲ್ಲಿ ಬಸವಾದಿ ಶರಣರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ತಾಲೂಕಿನಲ್ಲಿ ಮೊದಲ ಬಾರಿಗೆ ಶರಣರ ವಚನಗಳ ಕಂಠಪಾಠ ಸ್ಪರ್ಧೆಯನ್ನು ಐತಿಹಾಸಿಕ ಗರಳಪುರಿ ಉತ್ಸವದಲ್ಲಿ ಆಯೋಜನೆ ಮಾಡಿದ್ದೇವು. ಇದರಲ್ಲಿ ಮೂರು ವರ್ಷದ ಬಾಲಕರಿಂದ 80 ವರ್ಷದ ವಯೋವೃದ್ಧರು ಭಾಗವಹಿಸಿದ್ದರು. ಇಂತರ ಕಾರ್ಯಕ್ರಮಗಳ ಮೂಲಕ ಶರಣರಿಗೆ ಗೌರವ ಸಲ್ಲಿಸಬಹುದಾಗಿದೆ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಸ್ಮಿತಾ ರಾಮು, ನಂದಕಿಶೋರ್, ನಗರಸಭೆ ಪೌರಾಯುಕ್ತ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಒ.ಮಹೇಶ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಬಸವಯೋಗಿ, ಸೌಭಾಗ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net