ದಲಿತರಿಗೆ ಅಧಿಕಾರ ಸಿಗಲಿ

May Dalits get power.
May Dalits get power.
Published on
ಚಿಕ್ಕನಾಯಕನಹಳ್ಳಿ: ಡಾ.ಬಿ.ಆರ್​.ಅಂಬೇಡ್ಕರ್​ ಅವರು ದೇಶಕ್ಕೆ ಸಂವಿಧಾನ ನೀಡಿ ಎಲ್ಲರಿಗೂ ಹಕ್ಕುಗಳನ್ನು ನೀಡಿದ್ದರೂ ಇದುವರೆಗೆ ದಲಿತರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಅದ್ದರಿಂದ ನಮಗೆ ಅಧಿಕಾರ ಸಿಗಬೇಕಾದರೆ ನಾವು ಶಿಕ್ಷಿತರಾಗಿ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಜೈ ಭೀಮ್​ ಕ್ರಾಂತಿ ಸೇನೆಯ ಅಧ್ಯಕ್ಷ ಎಸ್​.ಜಗದೀಶ್​ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೈ ಭೀಮ್​ ಕ್ರಾಂತಿಸೇನೆ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಅಂಬೇಡ್ಕರ್​ ಅವರು ನಮಗೆ ನೀಡಿದ ಸಂವಿಧಾನದ ಆಶಯಗಳು ಇನ್ನು ಈಡೇರಿಲ್ಲ. ಅದ್ದರಿಂದ ನಾವು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ನಾವು ಸಹ ಶಿಕ್ಷಿತರಾಗಿ ಸಂಘಟನೆಯಾಗುವ ಮೂಲಕ ಹೋರಾಟ ಮಾಡಬೇಕು ಎಂದರು.
ತಾಲೂಕು ಅಧ್ಯಕ್ಷರಾಗಿ ಕೆ.ವಿ.ನಾಗರಾಜು, ಗೌರವಾದ್ಯಕ್ಷರಾಗಿ ಸಾಲ್ಕಟ್ಟೆ ಲೊಕೇಶ್​, ಉಪಾಧ್ಯಕ್ಷರಾಗಿ ಮೋಹನ್​, ಪ್ರಧಾನ ಕಾರ್ಯದರ್ಶಿಯಾಗಿ ಮಂಜು ಕೆಂಕೆರೆ, ಕಾರ್ಯದರ್ಶಿಯಾಗಿ ಹೇಮಂತ್​, ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್​, ಸದಸ್ಯರಾದ ಗಂಗಾಧರ್​, ಯಶ್ವಂತ್​, ದಿನೇಶ್​, ಗೌರಮ್ಮ, ಕೆಂಪಮ್ಮ ಅಧಿಕಾರ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net